8ರಂದು ನಗರಕ್ಕೆ ಹೆಚ್.ಡಿ.ಕೆ. ಜೆಡಿಎಸ್ ಅಭ್ಯರ್ಥಿ ಫುರ್ಲೆ ನಾಮಪತ್ರ ಸಲ್ಲಿಕೆ:ಕೇದಾರಲಿಂಗಯ್ಯ

0
1138

(ನಮ್ಮ ಪ್ರತಿನಿಧಿಯಿಂದ)
ಕಲಬುರಗಿ, ಅ. 6: ಗುರುವಾರ 8ರಂದು ನಗರಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಅವರು ಆಗಮಿಸಲಿದ್ದಾರೆ ಎಂದು ಜೆ.ಡಿಎಸ್. ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಅವರು ಹೇಳಿದ್ದಾರೆ.
ಅಂದು ಬೆಳಿಗ್ಗೆ 10.30ಕ್ಕೆ ಕಲಬುರಗಿ ನಗರಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸುವ ಅವರು 11.00 ಗಂಟೆಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ಶಿಕ್ಷಕ ಮತದಾರರ ಸಭೆ ನಡೆಸಿ ನಂತರ ಮಧ್ಯಾಹ್ನ ಸುಮಾರಿಗೆ ಈಶಾನ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಿಮ್ಮಯ್ಯ ಫುರ್ಲೆ ಅವರ ನಾಮಪತ್ರ ರ‍್ಯಾಲಿಯಲ್ಲಿ ಭಾಗವಹಿಸಲಿದ್ದು, ಅವರೊಂದಿಗೆ ಮಾಜಿ ಸಚಿವ ಬಂಡಪ್ಪ ಕಾಶೆಂಪುರ, ಸೇರಿದಂತೆ ಜೆಡಿಎಸ್ ಶಾಸಕರು, ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಈ ಕುರಿತಂತೆ ಇಂದು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಹಿರೇಮಠ ಅವರು ಒಮ್ಮತದ ಅಭ್ಯರ್ಥಿಯಾಗಿ ಪುರ್ಲೆ ಅವರನ್ನು ಆಯ್ಕೆಮಾಡಲಾಗಿದ್ದು, ಅವರ ಆಯ್ಕೆಗೆ ಸರ್ವ ಶಿಕ್ಷಕರು ಬೆಂಬಲ ನೀಡಲಿದ್ದಾರೆ ಎಂದ ಅವರು ರಾಜ್ಯ ಉಪಾಧ್ಯಕ್ಷರಾಗಿದ್ದ ಉಪನ್ಯಾಸಕ ಎಂ.ಬಿ. ಅಂಬಲಗಿ ಅವರು ರಾಜೀನಾಮೆ ನೀಡಿ, ಸ್ವತಂತ್ರವಾಗಿ ಕಣಕ್ಕಿಳಿಯುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಅವರು, ಈಗಾಗಲೇ ಅಂಬಲಗಿ ಅವರು ಬೆಂಗಳೂರಿಗೆ ಹೋಗಿದ್ದು, ಅಲ್ಲಿ ಕುಮಾರಣ್ಣರೊಂದಿಗೆ ಮಾತುಕತೆ ನಡೆಸಿದ್ದು, ಅಂಬಲಗಿ ಅವರ ಮನವೋಲಿಸಲಾಗಿದ್ದು, ಅವರು ನಾಳೆ ನಗರದಕ್ಕೆ ಆಗಮಿಸಲಿದ್ದು, ಅವರು ಜೆಡಿಎಸ್ ಬಿಟ್ಟಿಲ್ಲ ಹಾಗೆ ಅವರು ಕೂಡಾ ನಾಮಪತ್ರ ಸಲ್ಲಿಕೆ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿ ತಿಮ್ಮಯ್ಯ ಫುರ್ಲೆ, ಜೆಡಿಎಸ್ ಮುಖಂಡರಾದ ಉಸ್ತಾದ ನಾಸೀರ ಹುಸೇನ್, ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್, ಯುವ ಮುಖಂಡ ಕೃಷ್ಣಾರೆಡ್ಡಿ, ಸೇರಿದಂತೆ ಇನ್ನು ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here