ಉಪನ್ಯಾಸಕನಾಗಿ ಶಿಕ್ಷಕರ ಸೇವೆಗೆ ಅಭ್ಯರ್ಥಿಯಾಗಿ ಕಣಕ್ಕೆ:ಹಿರೇಮಠ

0
960

ಕಲಬುರಗಿ, ಅ. 6: ಈ ತಿಂಗಳು 28ರಂದು ನಡೆಯಲಿರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ದ್ವೆöÊವಾರ್ಷಿಕ ವಿಧಾನ ಪರಿಷತ್‌ನ ಸದಸ್ಯ ಸ್ಥಾನಕ್ಕೆ ಚುನಾವಣೆಯಲ್ಲಿ ಶಿಕ್ಷಕರ ಒತ್ತಡಕ್ಕೆ ಹಾಗೂ ಹಿತೈಷಿಗಳ ಬೆಂಬಲದೊAದಿಗೆ ಶಿಕ್ಷಕರ ಸೇವೆ ಮಾಡುವ ಉದ್ದೇಶದಿಂದ ಸ್ಪರ್ಧಿರಿಸಿರುವುದಾಗಿ ಪಕ್ಷೇತರ ಅಭ್ಯರ್ಥಿ ಎನ್. ಎಸ್. ಹಿರೇಮಠ ಹೇಳಿದ್ದಾರೆ.
ಈಗಾಗಲೇ ನಾನು ಕಳೆದ 11 ವರ್ಷದಿಂದ ಶಿಕ್ಷಕರ ಒಡನಾಡಿಯಾಗಿ ಮತ್ತು ಉಪನ್ಯಾಕನಾಗಿ, ಜ್ಞಾನಜ್ಯೋತಿ ಕರಿಯರ್ ಅಕಾಡೆಮಿಯ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದೇಬೆ ಎಂದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ, ಕಳೆದ ಒಂದು ದಶಕ ದಿಂದ ಶಿಕ್ಷಕರ ಸೇವೆ. ಮತ್ತು ಶಿಕ್ಷಣ ರಂಗದಲ್ಲಿ ಕಾಯರ್ಯ ನಿರ್ವಹಿಸುತ್ತಿದ್ದು ಶಿಕ್ಷಕರ ಮತ್ತು ಶಿಕ್ಷಣ ಕ್ಷೇತ್ರದ ಕುರಿತು ಅಪಾರವಾದ ತನುಭವ ಹೊಂದಿರುವ ನಾನು ಕಣಕ್ಕೆ ಇಳಿಯುವ. ಮೂಲಕ ಶಿಕ್ಷಕರ ಸೇವೆ ಮಾಡಲು ಬಯಸಿದ್ದೇನೆ ಎಂದು ತಿಳಿಸಿದರು.
ಅಲ್ಲದೇ ಸಮಸ್ತ ಶಿಕ್ಷಕರ ಸಮಸ್ಯೆಗಳ ಸ್ಪಂದನೆಗಾಗಿ ಈಗಾಗಲೇ ಈ ಕ್ಷೇತ್ರದ ಸುಮಾರು 4 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಶಿಕ್ಷಕರ ಕುಂದು ಕೊರತೆಗಳನ್ನು ಹಾಗೂ ಅವರ ಒಲವಿನ ಬಗ್ಗೆ ತಿಳಿದಿದ್ದು, ಈ ಬಾರಿ ನನ್ನ ಬೆಂಬಲಿಸಿ ಎಂದು ಮನವಿ ಮಾಡಿದರು.
ಇದೇ ತಿಂಗಳು 8ರಂದು ಬೆಳಿಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ಮರತೂರ, ಈರಣ್ಣಗೌಡ ಪೋಲಿಸ್ ಪಾಟೀಲ್, ಮಹ್ಮದ ಅರ್ಷಾದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here