ದಾವಣಗೆರೆ ವಿವಿಯಿಂದ ಡಾಕ್ಟರೆಟ್ ಪದವಿ ಪಡೆದ ಶ್ರೀಮತಿ ದ್ರಾಕ್ಷಾಯಿಣಿ ಅಪ್ಪಾ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದಿAದ ಸನ್ಮಾನ

0
830

ಕಲಬುರಗಿ, ಅ. 3: ಇತ್ತಿಚೆಗೆ ದಾವಣಗೆರೆೆ ವಿಶ್ವವಿದ್ಯಾಲಯವುÀ ಡಾಕ್ಟರೆಟ್ ಪದವಿ ನೀಡಿ ಗೌರವಿಸಿದ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆಯಾದ ಶ್ರೀಮತಿ ದ್ರಾಕಾಯಿಣಿ ಡಾ. ಶರಣಬಸಪ್ಪ ಅಪ್ಪ ಅವರನ್ನು ನಿನ್ನೆ ಅವರ ದಾಸೋಹ ಮನೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಶಾಲು ಹೋದಿಸಿ, ಹೂಗುಚ್ಚ ನೀಡಿ ಸನ್ಮಾನಿಸಿ ಗೌರವಿಸಿತು.
ಗೌರವ ಡಾಕ್ಟರೆಟ್ ಪದವಿ ಬಂದಿರುವುದು ಈ ಭಾಗದ ಸಮಸ್ತ ಮಹಿಳೆಯರ ಪರವಾಗಿ ಶ್ರೀಮತಿ ದ್ರಾಕ್ಷಾಯಿಣಿ ಅಪ್ಪಾ ಅವರಿಗೆ ನೀಡಿದಂತಾಗಿದೆ. ಇದು ಭಾಗಕ್ಕೆ ಒಂದು ಹೆಮ್ಮೆಯ ಸಂಗತಿ.
ಸAಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ, ಹಿರಿಯ ಪತ್ರಕರ್ತ ದೇವೆಂದ್ರಪ್ಪ ಕಪನೂರ, ರಾಜ್ಯ ಕರ‍್ಯಕಾರಿಣಿ ಸದಸ್ಯ ಹಣಮಂತರಾವ ಭೈರಾಮಡಗಿ, ಕೋಶಾಧ್ಯಕ್ಷ ಹಾಗೂ ಮನೀಷ ಪತ್ರಿಕೆಯ ಸಂಪಾದಕರಾದ ರಾಜು ಎಂ. ದೇಶಮುಖ, ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯೆ ಶ್ರೀಮತಿ ಭೀಮಬಾಯಿ ದೇಶಮುಖ, ಪ್ರಧಾನ ಕಾರ್ಯದರ್ಶಿ ದೇವೆಂದ್ರಪ್ಪ ಅವಂಟಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಧ ಸಂಗಮನಾಥ ರೇವತಗಾಂವ, ರಾಘವೇಂದ್ರ ದೇಸಾಯಿ, ರಾಜಶೇಖರಯ್ಯ ಸ್ವಾಮಿ ಸೇರಿದಂತೆ ಇನ್ನು ಹಲವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here