ನವದೆಹಲಿ, ಸೆ. 30: ಬಿಜೆಪಿ ವರಿಷ್ಠ ಹಿರಿಯ 92 ವರ್ಷದ ವಯಸ್ಸಿನ ಡೈನಾಮಿಕ ನಾಯಕ ಅಡ್ವಾಣಿ, ಬಿಜೆಪಿ ಹೃದಯಸ್ಥಂಬವಾದ ಮುರಲಿ ಮನೋಹರ್ ಜೋಶಿ, ಕ್ರಾಂತಿಕಾರಿಣಿ ಉಮಾ ಭಾರತಿ ಮತ್ತು ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಸೇರಿದಂತೆ ಎಲ್ಲಾ 32 ಆರೋಪಿಗಳನ್ನು ಪಿತೂರಿ ಆರೋಪದಡಿ ಖುಲಾಸೆಗೊಳಿಸಿÀ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯ ಈ ಇಂದು ಮಹತ್ವದ ತೀರ್ಪು ಹೊರಡಿಸಿದೆ.
1992 ರ ಡಿಸೆಂಬರ್ 6 ರಂದು ಬಾಬರಿ ಮಸೀದಿಯ ಗುಮ್ಮಟವನ್ನು ಧ್ವಂಸ ಮಾಡಲು ಈ ಮಹನೀಯರು ಯೋಜಿಸಿಲ್ಲ ಎಂದ ನ್ಯಾಯಾಲಯ “ಸಮಾಜ ವಿರೋಧಿ ಅಂಶಗಳು ರಚನೆಯನ್ನು ಉರುಳಿಸಿವೆ. ಆರೋಪಿಗಳು ಉರುಳಿಸುವಿಕೆಯನ್ನು ತಡೆಯಲು ಪ್ರಯತ್ನಿಸಿದರು” ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಎಸ್.ಕೆ. ಯಾದವ್ ಹೇಳಿದ್ದಾರೆ,
ಸಿಬಿಐ ತಯಾರಿಸಿದ ಆಡಿಯೋ ಮತ್ತು ವಿಡಿಯೋ ಸಾಕ್ಷ್ಯಗಳು ನಾಯಕರ ವಿರುದ್ಧದ ಆರೋಪಗಳನ್ನು ಸ್ಥಾಪಿಸಿಲ್ಲ.
ಕಳೆದ 28 ವರ್ಷಗಳ ಹಳೆಯ ವಿವಾವದವೊಂದನ್ನು ಇಂದು ತೀರ್ಪು ನೀಡಿದ ಬಳಿಕ ಇತ್ಯರ್ಥವಾದಂತಾಗಿದೆ.