ಡಿಸಿಎಂ ಗುಣಮಖಕ್ಕೆ ದೇವರಲ್ಲಿ ವಿಶೇಷ ಪ್ರಾರ್ಥನೆ

0
794

ಕಲಬುರಗಿ, ಸೆ. 29: ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಎಂ. ಕಾರಜೋಳ ಅವರು ಕೊರೊನಾ ಸೋಂಕಿನಿAದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಈ ಸೋಂಕಿನಿAದ ಬಹುಬೇಗ ಗುಣಮುಖರಾಗಿ ಹೊರಬಂದು ಮತ್ತೆ ರಾಜ್ಯದ ಜನರ ಸೇವೆಯಲ್ಲಿ ತೊಡಗಲಿ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರ ನೇತೃತ್ವದಲ್ಲಿ ನಗರದ ನಾಡದೇವತೆ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಬಸವರಾಜ ಮತ್ತಿಮೂಡ ಅಭಿಮಾನಿಗಳ ಸಂಘದಿAದ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಸಂಗಮೇಶ ವಾಲಿ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಮಾಲೀಪಾಟೀಲ್, ಬಿಜೆಪಿ ಮುಖಂಡರಾದ ಅಂಬಾರಾಯ ಚಲಗೇರಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನೀಲಕುಮಾರ ಡೋಂಗರಗಾAವ, ಬಸವರಾಜ ಮತ್ತಿಮೂಡ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಮಧುಕರ ಕಾಂಬಳೆ ಚಿಂಚನಸೂರ, ರವಿಚಂದ್ರನ್ ಕ್ರಾಂತಿಕಾರ, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಾಂತವೀರ ಬಡಿಗೇರ, ಬಿಜೆಪಿ ಮುಖಂಡರಾದ ರಮೇಶ ಸಿಡ್ಡೋಣ, ರವಿ ಸಿಂಗೆ, ಸಿದ್ದು ಮದಾನಿ, ಪರಮೇಶ್ವರ ವಾಲಿ ಸೇರಿದಂತೆ ಇನ್ನು ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಡಿಸಿಎಂ ಬಹುಬೇಗನೆ ಗುಣಮುಖರಾಗುವಂತೆ ಪ್ರಾರ್ಥನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here