ದಲಿತ ಯುವಕನ ಕೊಲೆ ಖಂಡಿಸಿ ವಿಜಯಪುರದಲ್ಲಿ ಮಾದಿಗ ದಂಡೋರಾ 29ರಂದು ಬೃಹತ್ ಪ್ರತಿಭಟನೆ

0
1002

ಕಲಬುರಗಿ, ಸೆ. 25: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಇತ್ತೀಚೆಗೆ ದಲಿತ ಯುವಕ ಅನೀಲ ಸಂಗಳಿ ಎಂಬುವವರ ಹತ್ಯೆಯ ನ್ನು ಖಂಡಿಸಿ 29.9.2020ರಂದು ವಿಜಯಪುರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ದಂಡೋರಾ ಮಾದಿಗ ಮೀಸ ಲಾತಿ ಹೋರಾಟ ಸಮಿತಿಯ ಪದಾಧಿ ಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ನಗರದ ಪತ್ರಿಕಾ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಉಪಾಧ್ಯಕ್ಷ ಮಲ್ಲಿಕಾ ರ್ಜುನ ಕಾಳಗಿ, ರಾಜ್ಯದಲ್ಲಿ ಬಿಜೆಪಿ ಸರ ಕಾರ ಬಂದಾಗಿನಿAದ ದಲಿತರ ಮೇಲೆ ಹೆಚ್ಚಿನ ದೌರ್ಜನ ನಡೆಯುತ್ತಿವೆ, ಇದರ ತಡೆಗೆ ಸರಕಾರ ವಿಫಲವಾಗಿದೆ, ಇದರ ಬಗ್ಗೆ ನಮ್ಮ ಸಮಿತಿಯು ರಾಜ್ಯಾಧ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಅಲ್ಲದೇ ಮೀಸಲಾತಿ ವರ್ಗೀಕರಣಕ್ಕಾಗಿ ನ್ಯಾ. ಎ. ಜೆ. ಸದಾಶಿವ ಆಯೋಗದ ವರದಿ ಅನು ಷ್ಠಾನವು ನೆನೆಗುದಿಗೆ ಬಿದ್ದಿದ್ದು, ಇದನ್ನು ಕೂಡಲೇ ಅನುಷ್ಠಾನ ಮಾಡ ಬೇಕೆಂದು ಆಗ್ರಹಿಸಿ 29ರಂದು ಬೃಹತ್ ರ‍್ಯಾಲಿ ಹಮ್ಮಿ ಕೊಳ್ಳಲಾಗಿದೆ ಎಂದರು.
ಹತ್ಯೆಗೀಡಾದ ಮೃತ ಕುಟುಂಬ ದವರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು 10 ಎಕರೆ ಜಮೀನು ಸರಕಾರದಿಂದ ಮಂಜೂರು ಮಾಡಬೇಕು, ಕುಟುಂಬದಲ್ಲಿ ಒಬ್ಬ ವ್ಯಕ್ತಿಗೆ ಅನುಕಂಪದ ಆಧಾರದ ಮೇಲೆ ಸರಕಾರಿ ನೌಕರಿ ಒದಗಿಸಬೇಕು, ಸದರಿ ಕುಟುಂಬಕ್ಕೆ ಸೂಕ್ತ ಪೋಲಿಸ್ ಬಂದೋಬಸ್ತ ಒದಗಿಸಬೇಕು ಎಂದು ಹೀಗೆ ಹಲವು ಬೇಡಿಕೆಗಳ ಈಡೇ ರಿಕೆಗಾಗಿ ಈ ಬೃಹತ್ ರ‍್ಯಾಲಿ ಹಮ್ಮಿಕೊಳ್ಳ ಲಾಗಿದೆ. ಈ ರ‍್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ದಲಿತರು, ಬುದ್ಧಿಜೀವಿಗಳು, ಯುವಕರು, ದಲಿತ ಮುಖಂಡರು ಭಾಗ ವಹಿಸಲಿದ್ದಾರೆ ಎಂದು ಅವರು ವಿವರಿಸಿ ದರು.
ಸುದ್ದಿಗೋಷ್ಠಿಯಲ್ಲಿ ಕಲಬುರಗಿ ಜಿಲ್ಲಾ ಅಧ್ಯಕ್ಷ ಚಂದ್ರಕಾAತ ಸಗರ, ಯಾದ ಗಿರಿ ಜಿಲ್ಲಾಧ್ಯಕ್ಷ ಬಸವರಾಜ ನಾಯ್ಕಲ್, ಮಾದಿ ಗ ಮುಖಂಡರಾದ ದೇವೆಂದ್ರಪ್ಪ ಪಿ., ಪರಶುರಾಮ ಕಟ್ಟಿಮನಿ, ಬಸವರಾಜ ನಾ ಟೀಕಾರ ಅವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here