ಕೊರೊನಾಗೆ ಮತ್ತೋರ್ವ ಶಾಸಕ ಬಿ. ನಾರಾಯಣರಾವ ಬಲಿ

0
917

ಬೆಂಗಳೂರು, ಸೆ. 24: ಬಸವಕಲ್ಯಾಣದ ಶಾಸಕ ಬಿ. ನಾರಾಯಣರಾವ ಅವರು ಇಂದು ಮಧ್ಯಾಹ್ನ 4.20ರ ಸುಮಾರಿಗೆ ಕೊರೊನಾದಿಂದ ನಿಧನರಾಗಿದ್ದಾರೆ.
ಕಳೆದ 23 ದಿನಗಳಿಂದ ಅವರನ್ನು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಇಲ್ಲಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು, ಕಳದ ಎರಡು ದಿನಗಳಿಂದ ಅವರ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ ಹಿನ್ನೆಲೆಯಲ್ಲಿ ಅವರಿಗೆ ವೆಂಟೆಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.
ಅವರಿಗೆ 66 ವರ್ಷ ವಯಸ್ಸಾಗಿತ್ತು, ಅವರು ಬಸವಕಲ್ಯಾಣ ತಾಲೂಕಿನ ಬಸವಂತಪುರ ಗ್ರಾಮದಲ್ಲಿ 30 ಜೂನ್ 1954ರಲ್ಲಿ ಜನಿಸಿದ್ದರು.
ಅವರ ಪೂರ್ತಿ ಹೆಸರು ಬಸಂತಪುರ ನಾರಾಯಣರಾವ ಅವರು ಕೊಲಿ ಸಮಾಜದವರಾಗಿದ್ದು, 2018ರಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿದ್ದರು.
ಕೋವಿಡ್ -19 ಗುತ್ತಿಗೆ ಪಡೆದ ನಂತರ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ ಶಾಸಕ ಬಿ ನಾರಾಯಣ್ ರಾವ್ ಅವರ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್ -19 ಸೋಂಕಿನ ರೋಗದಿಂದ ರಾವ್ ಅವರನ್ನು ಸೆಪ್ಟೆಂಬರ್ 1 ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಮನೀಶ್ ರೈ ತಿಳಿಸಿದ್ದಾರೆ.
“ಪ್ರಸ್ತುತ, ಅವರು ವೆಂಟಿಲೇಟರ್, ಮತ್ತು ಡಯಾಲಿಸಿಸ್ ಸೇರಿದಂತೆ ಅನೇಕ ಬೆಂಬಲಗಳಲ್ಲಿ ಬಹು-ಅಂಗಾAಗ ವೈಫಲ್ಯದಿಂದ ಸಾವಿಗೀಡಾಗಿದ್ದಾರೆಂದು ಡಾ ರೈ ಹೇಳಿದರು.

LEAVE A REPLY

Please enter your comment!
Please enter your name here