ಕೊರೊನಾಗೆ ಕೇಂದ್ರ ರೇಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಇನ್ನಿಲ್ಲ

0
1016

ನವದೆಹಲಿ, ಸೆ. 23: ಕೇಂದ್ರ ರ‍್ವೇಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಇಂದು ವಿಧಿವಶರಾಗಿದ್ದಾರೆ.
ಕಳೆದ ಒಂದು ವಾರದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರನ್ನು ಕಳೆದ 2 ದಿನಗಳಿಂದ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾಗಿಸಿತ್ತು. ತೀವ್ರ ಉಸಿರಾದ ತೊಂದರೆಯಿAದ ಚಿಕಿತ್ಸೆ ಫಲಿಸದೆ ಇಂದು ಸಂಜೆ ಕೊನೆಯುಸಿ ರೆಳೆದರು.
65 ವರ್ಷ ವಯಸ್ಸಿನ ಸುರೇಶ ಅಂಗಡಿ ಅವರು ಬೆಳಗಾವಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಮಂಗಳ ಅಂಗಡಿ ಜೊತೆ ವಿವಾಹವಾಗಿದ್ದ ಅಂಗಡಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
1955ರ ಜೂನ್ 1ರಂದು ಬೆಳಗಾವಿ ಜಿಲ್ಲೆಯ ಕೆ.ಕೆ. ಕೊಪ್ಪ ಗ್ರಾಮದಲ್ಲಿ ಜನಿಸಿದ್ದು, ಎಸ್‌ಎಸ್‌ಎಸ್ ಕಾಲೇಜಿನಲ್ಲಿ ಪದವಿ ಪಡೆದ ಅವರು ರಾಜಲಕ್ಷö್ಮಣಗೌಡ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು.
ಬೆಳಗಾವಿ ಲೋಕಸಭೆಯಿಂದ ಸತತವಾಗಿ ನಾಲ್ಕು ಬಾರಿ ಅಂದರೆ 2004, 2009, 2004 ಮತ್ತು ಕಳೆದ ವರ್ಷ 2019ರಲ್ಲಿ ಸಂಸದರಾಗಿ ಆಯ್ಕೆಯಾಗಿ ಪ್ರಥಮ ಬಾರಿಗೆ ಕೇಂದ್ರ ಸಚಿವರಾಗಿದ್ದರು.

LEAVE A REPLY

Please enter your comment!
Please enter your name here