ಮಹಾರಾಷ್ಟç ರಾಜ್ಯಕ್ಕೆ ಸಾರಿಗೆ ಸಂಚಾರ ಪುನರಾರಂಭ

0
878

ಕಲಬುರಗಿ, ಸೆ. 19:ಅನ್‌ಲಾಖ್ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ನೆರೆಯ ಮಹಾರಾಷ್ಟç ರಾಜ್ಯಕ್ಕೆ ಬಸ್ ಸಂಚಾರ ಪುನರಾರಂಭಿಸಲಾಗಿದೆ.
ಪ್ರಯಾಣಿಕರ ದಟ್ಟಣೆಗನುಗುಣವಾಗಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿAದ ಮಹಾರಾಷ್ಟç ರಾಜ್ಯಕ್ಕೆ ವಿವಿಧ ಸ್ಥಳಗಳಿಗೆ ಸಾರಿಗೆ ಸಂಚಾರವನ್ನು ಪುನರಾರಂಭಿಸಲಾಗುತ್ತಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
ಬಸ್ಸಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರಥಮ ಹಂತದಲ್ಲಿ ಸೋಲಾಪೂರ, ಉಮರ್ಗಾ, ಉದಗೀರ್, ದೇಗಲೂರು, ನಾಂದೇಡ ಹಾಗೂ ಔರಂಗಬಾದ ಮಾರ್ಗಗಳಲ್ಲಿ ಈಗಾಗಲೇ ಸೆಪ್ಟೆಂಬರ್ 16 ರಿಂದ ಸಾರಿಗೆ ಬಸ್‌ಗಳ ಕಾರ್ಯಾಚರಣೆ ಮಾಡಲಾಗಿದೆ. ಸಾಂಗ್ಲಿ ಹಾಗೂ ಕೋಲ್ಲಾಪೂರ ವಲಯಗಳಲ್ಲಿ ಸೆಪ್ಟೆಂಬರ್ 21 ರವರೆಗೆ ಕರ್ಪ್ಯೂ ಜಾರಿಯಲ್ಲಿರುವುದರಿಂದ ಮಹಾರಾಷ್ಟç ರಾಜ್ಯದ ಎಲ್ಲಾ ಸಾರಿಗೆ ಸಂಚಾರವನ್ನು ಸೆಪ್ಟೆಂಬರ್ 22 ರಿಂದ ರಿಂದ ಪೂರ್ಣ ಆಸನಗಳೊಂದಿಗೆ ಪ್ರಯಾಣಿಸಲು ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು.
ಸಾರ್ವಜನಿಕ ಪ್ರಯಾಣಿಕರು ಮುಂಗಡ ಆಸನಗಳನ್ನು ಕೆ.ಎಸ್.ಆರ್.ಟಿ.ಸಿ.ಯ ತಿತಿತಿ.ಞsಡಿಣಛಿ.iಟಿ ವೆಬ್‌ಸೈಟ್‌ದಲ್ಲಿ ಹಾಗೂ ಸಂಸ್ಥೆಯ / ಪ್ರಾಂಚೈಸಿ ಕೌಂಟರ್‌ಗಳಲ್ಲೂ ಆಸನಗಳನ್ನು ಕಾಯ್ದಿರಿಸಿ ಕೊಳ್ಳಬಹುದಾಗಿದೆ. ಸಾರ್ವಜನಿಕರು ಮೇಲ್ಕಂಡ ಸಾರಿಗೆ ಬಸ್ ಸೌಲಭ್ಯದ ಸದುಪಯೋಗಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here