ಕಲಬುರಗಿ. ಸೆ.11- ಕಳೆದ ಎರಡು ದಿನಗಳ ಹಿಂದೆಯಷ್ಟೆ ಪಾದಚಾರಿಯೊಬ್ಬನ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡಿದ್ದ ಪಂಚಶೀಲನಗರದ ನಿವಾಸ ಆಗಿರುವ ಛೋಟ್ಯಾನನ್ನು ಪೋಲಿಸರು ಇಂದು ಬಂಧಿಸಿದ್ದಾರೆ.
ರೌಡಿಶೀಟರ ಛೋಟ್ಯಾ ಮಾರಕಾಸ್ತ್ರಗಳಿಂದ ಲಕ್ಷ್ಮೀ ನಗರದ ನಿವಾಸಿ ವಿಶಾಲ್ ಗುತ್ತೇದಾರ್ ಎಂಬಾತನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಇತನನ್ನು ಪೋಲಿಸರು ಗುರುವಾರ ಬಂಧಿಸಿದ್ದಾರೆ.
ಈ ಘಟನೆ ನಗರದ ಹಳೆಯ ಜೇವರ್ಗಿ ರಸ್ತೆಯಲ್ಲಿನ ಪಂಚಶೀಲನಗರದಲ್ಲಿ ನಡೆದಿತ್ತು. ರೌಡಿಶೀಟರ್ ಛೋಟ್ಯಾ ವಿಶಾಲ್ ಗುತ್ತೇದಾರ್ ಅವರು ಕಿರಾಣಿ ಖರೀದಿಗಾಗಿ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ದಾಳಿ ಮಾಡಿ ಹೊಟ್ಟೆ ಮತ್ತು ಕೈಗೆ ಚಾಕುವಿನಿಂದ ಮನಬಂದAತೆ ಇರಿದು ಪರಾರಿಯಾದ ಎನ್ನಲಾಗಿದೆ.
ಪಂಚಶೀಲನಗರದ ನಿವಾಸಿ ಆಗಿರುವ ಛೋಟ್ಯಾ ರೌಡಿಶೀಟರ್ ಪಟ್ಟಿಯಲ್ಲಿದ್ದು, ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆತ ಈ ಹಿಂದೆ ಪೋಲಿಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಿದ್ದ.