ಪರಸ್ಪರ ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಓರ್ವ ವ್ಯಕ್ತಿ ಸಾವು, ಒಬ್ಬರಿಗೆ ಗಾಯ

0
950

ಅಫಜಲಪೂರ, ಸೆ. 11: ತಾಲೂಕಿನ ರಸ್ತೆಯ ಡಿಗ್ಗಿ ಕ್ರಾಸ್ ಹತ್ತಿರ ಪರಸ್ಪರ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸಂತೋಷ ತಂದೆ ಶಾಂತಪ್ಪ ಅಂದೋಡಗಿ ಸಾವನಪ್ಪಿದ ಘಟನೆ ವರದಿಯಾಗಿದೆ.
ಈ ಘಟನೆಯು ದಿನಾಂಕ 10.9.2020ರಂದು ಬೆಳಿಗ್ಗೆ 9 ಗಂಟೆಗೆ ದ್ವಿಚಕ್ರವಾಹಣದಲ್ಲಿ ಹೊರಟ ಶಂಕರ ತಂದೆ ಮಲ್ಲಿಕಾರ್ಜುನ ಕೊರಳ್ಳಿ ಮತ್ತು ಸಂತೋಷ ಶಾಂತಪ್ಪ ಅಂದೋಡಗಿ ಅವರಿಗೆ ಗಾಯಗಳಾಗಿದ್ದು, ಈದರಲ್ಲಿ ಶಂಕರಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸಂತೋಷ ಎಂಬಾತನಿಗೆ ಸಂತೋಷನ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಾಗಾಯವಾಗಿ ಪ್ರಜ್ಞಾ ಹೀನನಾಗಿದ್ದ ಆತನನ್ನು ಮಲ್ಲಿನಾಥ ಕೋರಳ್ಳಿ ಇಬ್ಬರು ರೋಡಿಗೆ ಬರುತ್ತಿದ್ದ ಒಂದು ಖಾಸಗಿ ವಾಹನವನ್ನು ನಿಲ್ಲಿಸಿ, ಸದರಿ ವಾಹನದಲ್ಲಿ ಸಂತೋಷನನ್ನು ಮತ್ತು ಶಂಕರನನ್ನು ಹಾಕಿಕೊಂಡು ಅಫಜಲಪೂರಕ್ಕೆ ಕರೆದುಕೊಂಡು ಬರುತ್ತಿದ್ದಾಗ, ಸಂತೋಷನು ಮದ್ಯಾಹ್ನ 12:40 ಗಂಟೆ ಸುಮಾರಿಗೆ ಮಾರ್ಗ ಮದ್ಯ ಸೋನ್ನ ಕ್ರಾಸ ಹತ್ತಿರ ಮೃತ ಪಟ್ಟಿರುದ್ದಾನೆ ಎಂದು ಪೋಲಿಸ್ ಮೂಲಗಳ ಪ್ರಕಾರ ತಿಳಿದುಬಂದಿದೆ.
ಈ ಕುರಿತಂತೆ ಅಫಜಲಪೂರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here