ಶಹಾಬಾದ ಕಾರ್ಯನಿರತ ಪತ್ರಕರ್ತರ ಸಂಘದಕ್ಕೆ ಭಟ್ ಅಧ್ಯಕ್ಷರಾಗಿ ಆಯ್ಕೆ

0
974

ಶಹಾಬಾದ, ಸೆ. 7: ನೂತನ ಶಹಾಬಾದ ತಾಲೂಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಶಹಾಬಾದ ವಿಜಯವಾಣಿ ಪತ್ರಿಕೆಯ ವರದಿ ಗಾರರಾದ ರಮೇಶ ಭಟ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಾಸು ಚವ್ಹಾಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಶಹಾಬಾದ ಪ್ರವಾಸಿ ಮಂದಿರದಲ್ಲಿ ಸೇರಿ ದ ಸಭೆಯಲ್ಲಿ ಬಗ್ಗೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರ ಭವಾನಿಸಿಂಗ್ ಎಂ. ಠಾಕೂರ ಅವರು ಇವರಿಬ್ಬರ ಆಯ್ಕೆಯನ್ನು ಘೋಷಿಸಿದರು.
ಜಿಲ್ಲಾ ಸಂಘದ ಕೋಶಾಧ್ಯಕ್ಷರಾದ ರಾಜು ಎಂ. ದೇಶಮುಖ, ರಾಜ್ಯಸಮಿತಿಯ ಸದಸ್ಯರಾದ ದೇವೆಂದ್ರಪ್ಪ ಹೆಚ್. ಕಪನೂರ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಅವರುಗಳು ಈ ಆಯ್ಕೆ ಪ್ರಕ್ರಿಯೆ ಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here