ನಿಲ್ಲದ ಕೊರೊನಾ ಮಹಾಮಾರಿ: ಸೋಮವಾರ 141 ಜನರ ಬಲಿ, ಕಲಬುರಗಿಯಲ್ಲಿ 4 ಜನರ ಸಾವು

0
959

ಬೆಂಗಳೂರು, ಸೆ. 7: ರಾಜ್ಯದಲ್ಲಿ ಇಂದು ಸೋಮವಾರ ಕೂಡ ಕೊರೋನಾದಿಂದ 5773 ಜನರಲ್ಲಿ ಸೋಂಕು ಪತ್ತೆಯಾಗಿದೆ.ದೀ ಮಾರಕ ಮಹಾಮಾರಿ ಇಂದು 141 ಜನ ಬಲಿಯಾ ಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿ ತರ ಸಂಖ್ಯೆ 404324 ಕ್ಕೇರಿಕೆ ಯಾದರೆ, ಒಟ್ಟು ಸಾವಿನ ಸಂಖ್ಯೆ 6534ಕ್ಕೆ ಏರಿಕೆಯಾಗಿದೆ.
ಇಂದು ಬೆಂಗಳೂರಿನಲ್ಲಿ 2942 ಜನರಿಗೆ ಕೊರೋನಾ ತಗುಲಿದ್ದು, 48 ಮಂದಿ ಪ್ರಾಣ ಬಿಟ್ಟಿದ್ದಾರೆ. ಮಹಾನಗಿರಿಯೊಂದರಲ್ಲೇ ಈವರೆಗೆ 150523 ಮಂದಿಗೆ ಕೊರೋನಾ ತಗುಲಿದೆ. ಬೆಂಗಳೂರಲ್ಲಿ ಈವರೆಗೆ 2211 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.
ಇಂದು 8015 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 300770 ಜನ ಗುಣಮುಖರಾಗಿದ್ದಾರೆ. ಉಳಿದಂತೆ 97001 ಸಕ್ರಿಯ ಕೇಸ್‌ಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದರಲ್ಲಿ 794 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಯಂತೆ 45421 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು 3393676 ಮಂದಿಗೆ ಕೊರೋನಾ ಟೆಸ್ಟ್ ಮಾಡ ಲಾಗಿದೆ.
ಬೆಂಗಳೂರಿನಲ್ಲಿ ನಿಲ್ಲದ ಈ ಮಹಾ ಮಾರಿಗೆ ಇಂದು 2942 ಜನರಿಗೆ ಸೋಂಕು ತಗುಲಿದ್ದು, ಅದರಂತೆ ಬಳ್ಳಾರಿಯಲ್ಲಿ 266, ಚಿಕ್ಕಮಗಳೂರು 101, ಬಾಗಲಕೋಟೆ 126, ಬೆಳಗಾವಿ 75, ಬೆಂಗಳೂರು ಗ್ರಾಮಾಂತರ 77, ಬೀದರ 32, ಚಾಮರಾಜನಗರ 32, ಚಿತ್ರದುರ್ಗ 50, ದಕ್ಷಿಣ ಕನ್ನಡ 152, ದಾವಣ ಗೆರೆ 199, ಕಲಬುರಗಿ 141, ಕೊಪ್ಪಳ 139, ಮಂಡ್ಯ 169, ಮೈಸೂರು 221, ರಾಯಚೂರು 22, ರಾಮನಗರ 11, ಶಿವಮೊಗ್ಗ 150, ಉಡು ಪಿ 113, ಉತ್ತರ ಕನ್ನಡ 77, ವಿಜಯಪುರ 112, ಯಾದಗಿರಿ 137, ಹಾವೇರಿ 53, ಕೊಡಗು 11, ಕೋಲಾರ 26, ಗದಗ 87, ಧಾರವಾಡ 29, ಚಿತ್ರದುರ್ಗ 50, ಚಿಕ್ಕಬಳ್ಳಾಪುರ 82 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.
ಕೊರೊನಾಗೆ ಇಂದು ಕಲಬುರಗಿಯಲ್ಲಿ 4 ಜನ ಬಲಿಯಾಗಿದ್ದು, ಇಲ್ಲಿಯವರೆಗೆ ಈ ಮಾರಕ ಮಹಾಮಾರಿಗೆ 229 ಜನರು ಸಾವನ್ನ ಪ್ಪಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಇಂದು 141 ಜನ ಸೇರಿದಂತೆ ಈವರೆಗೆ 13051 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, ಇಂದು 241 ಜನರು ಸೇರಿದಂತೆ ಒಟ್ಟು ಈವರೆಗೆ 10772 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ. ಉಳಿದಂತೆ 2050 ಸಕ್ರೀಯ ಪ್ರಕರಣಗಳು ಜಿಲ್ಲೆಯಲ್ಲಿವೆ.

LEAVE A REPLY

Please enter your comment!
Please enter your name here