ಕೊರೊನಾಗೆ ಸೋಮವಾರ 135 ಬಲಿ ರಾಜ್ಯದಲ್ಲಿ 9058 ಜನರಿಗೆ ಸೋಂಕು ಪತ್ತೆ

0
857

ಕಲಬುರಗಿ, ಸೆ. 1: ರಾಜ್ಯದಲ್ಲಿ ಸೆಪ್ಟೆಂಬರ್ ಪ್ರಾರಂಭದ ದಿನ 1ರಂದು 135 ಜನರು ಮಾರಕ ಕೊರೊನಾಗೆ ಬಲಿಯಾಗಿದ್ದು, ಅಲ್ಲದೇ ಕಳೆದ 24 ಗಂಟೆಗಳಲ್ಲಿ 9058 ಜನರು ಈ ಸೋಂಕಿನಿAದ ಇಂದು ಆಸ್ಪತ್ರೆ ಸೇರಿದ್ದಾರೆ.
ರಾಜ್ಯದಲ್ಲಿ ಈವರೆಗೆ ಕೊರೊನಾ ಸೋಂಕಿಗೆ 351481 ಜನರು ಬಳಲಿದ್ದು, ಅದರಲ್ಲಿ ಇಂದು 5159 ಜನರು ಸೇರಿ ಒಟ್ಟು 254626 ಜನರಯ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ರಾಜ್ಯದಲ್ಲಿ 90999 ಸಕ್ರೀಯ ಕೊರೊನಾ ಪ್ರಕರಣಗಳಿದ್ದು, ದಿನೇ ದಿನೇ ರೋಗ ಹೆಚ್ಚುತ್ತಿದೆ, ವಿನಹಃ ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ ಆದರೂ ಈ ಬಗ್ಗೆ ಜನರಲ್ಲಿ ಜಾಗ್ರತಿ ಕಡಿಮೆಯಾಗಿದ್ದು, ಎಲ್ಲಿಯೂ ಈ ರೋಗದ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಬಳಸುವುದು ಕಾಣಸಿಗುವುದಿಲ್ಲ.
ಈವರೆಗೆ ಕರ್ನಾಟಕದಲ್ಲಿ 5837 ಜನರು ಪ್ರಾಣ ಕಳೆದುಕೊಂಡರೆ, ಇನ್ನು 762 ಜನರು ತರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದ ಜಿಲ್ಲೆಗಳಲ್ಲಿ ಇಂದು ಹೊಸದಾಗಿ ಕೊರೊನಾ ಸೋಂಕು ಪ್ರಕರಣದ ವಿವರ ಇಂತಿದೆ
ಅತೀ ಹೆಚ್ಚು ಕಳೆದ 3 ತಿಂಗಳಿAದ ಬೆಂಗಳೂರು ನಗರವೆ ಕೊರೊನಾ ಸೋಂಕು ತಗಲುವ ಜಿಲ್ಲೆಯಾಗಿದ್ದು, ಇಲ್ಲಿ ಇಂದು ಸಹ 2967 ಜನರಿಗೆ ಸೋಂಕು ತಲುಗಲಿದ್ದು, ಉಳಿದಂತೆ ಮೈಸೂರು 737, ಹಾಸನದಲ್ಲಿ 461, ಬಳ್ಳಾರಿ 393, ತುಮಕೂರ 327, ಬೆಳಗಾವಿ 316, ದಕ್ಷಿಣ ಕನ್ನಡ 352, ದಾವಣಗೆರೆ 289, ರಾಯಚೂರು 245, ಶಿವಮೊಗ್ಗ 233, ಕಲಬುರಗಿ 220, ಧಾರವಾಡ 199, ಕೊಪ್ಪಳ 195, ಮಂಡ್ಯ 197, ಬಾಗಕಕೊಟ 136, ಬೆಂಗಳೂರು ಗ್ರಾಮಾಂತರ 145, ಚಿಕ್ಕಬಳ್ಳಾಪೂರ 210, ಗದಗ 194, ಹಾವೇರಿ 153, ಬೀದರ 63, ಚಾಮರಾಜನಗರ 49, ಕೊಡಗು 54, ಕೊಲಾರ 64, ರಾಮನಗರ 105, ಉಡುಪಿ 161, ಉತ್ತರ ಕನ್ನಡ 114, ವಿಜಯಪುರ 67, ಯಾದಗಿರ 142 ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ.
ಬೆಂಗಳೂರು ನಗರದ ಒಂದರಲ್ಲೆ ಸೋಮವಾರ ಕೊರೊನಾಗೆ 40 ಜನರು ಬಲಿಯಾಗಿದ್ದು, ಮೈಸೂರಿನಲ್ಲಿ 12, ಹಾಸನದಲ್ಲಿ 11, ಶಿವಮೊಗ್ಗದಲ್ಲಿ 10, ಬೆಳಗಾವಿಯಲ್ಲಿ 7, ಕಲಬುರಗಿ, ವಿಜಯಪುರ, ಕೊಪ್ಪಳ, ದಾವಣಗೇರೆ, ಬಳ್ಳಾರಿಯಲ್ಲಿ ತಲಾ 4 ಜನರು ಮೃತಪಟ್ಟಿದ್ದು,
ತುಮಕೂರ ಮತ್ತು ರಾಯಚೂರು ತಲಾ 3 ಜನರು ಸಾವಿಗೀಡಾಗಿದ್ದು, ಉಳಿದಂತೆ ಹಲವು ಜಿಲ್ಲೆಗಳಲ್ಲಿ ಒಂದೇರಡು ಜನರು ಕೋವಿಡ್-19ಕ್ಕೆ ತುತ್ತಾಗಿದ್ದಾರೆ.

LEAVE A REPLY

Please enter your comment!
Please enter your name here