ಸದಾಶಿವ ಆಯೋಗದ ವರದಿ ಜಾರಿಗೆ ಮರುಪರೀಶಿಲನೆಗಾಗಿ ರಾಜ್ಯ ಸರಕಾರಕ್ಕೆ ಉಚ್ಚನ್ಯಾಯಾಲಯದ ಆದೇಶ ಸ್ವಾಗತಾರ್ಹ

0
951

ಕಲಬುರಗಿ, ಆಗಸ್ಟ. 30: ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ವರ್ಗೀಕರಿಸುವ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ, 2004ರಲ್ಲಿ ನೀಡಿದ ತೀರ್ಪನ್ನು ಮರು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು ನಾವು ಸ್ವಾಗತಿಸುತ್ತೇವೆ ಎಂದು ಡಾ. ಬಾಬುಜಗಜೀನವರಾಂ ಅಭಿವೃದ್ಧಿ ಮತ್ತು ಹೋರಾಟ ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಅಂಬಾರಾಯ ಚಳಗೇರಿ ಅವರು ಎಂದು ಹೇಳಿದ್ದಾರೆ.
ಸುಮಾರು 3 ದಶಗಳಿಂದ ಮಾದಿಗ ಸಂಘಟನೆಗಳ ಹೋರಾಟ ಫಲದಿಂದ ಇಂದು ಒಳ ಮೀಸಲಿಗೆ ಸಂಬAಧಿಸಿದ ಮಹತ್ವದ ಬೆಳವಣಿಗೆಯಾಗಿದ್ದು, ಶಕ್ತಿಹೀನ, ಬಾಯಿಯಿಲ್ಲದ ಸಮುದಾಯಕ್ಕೆ ಉಸಿರುವ ನೀಡಿದಂತಾಗಿದೆ ಎಂದು ಹೇಳಿದ ಅವರು ಪರಿಶಿಷ್ಟ ಜಾತಿಯ ಲ್ಲಿ ಎ.ಬಿ.ಸಿ.ಡಿ. ವರ್ಗೀಕರಣ ಮಾಡಲು ನ್ಯಾಯಮೂತಿ ಎ. ಜೆ. ಸದಾಶಿವ ಆಯೋಗ ಈಗಾಗಲೇ ಶಿಫಾರಸ್ಸು ಮಾಡಿದ್ದು, ಈಗ ಇದಕ್ಕೆ ಮರು ಜೀವ ಬಂದAತಾಗಿದೆ, ಮಾದಿಗ ಸಮುದಾಯಕ್ಕೆ ನ್ಯಾಯಬದ್ಧವಾದ ಸೌಲಭ್ಯ ಮತ್ತು ಸಮಾನ ಹಂಚಿಕೆ ಮಾಡುವ ವಿಶ್ವಾಸ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಸ್ವೀಕರಿಸಿ ಸದಾಶಿವ ಆಯೋಗದ ವರದಿ ಯಥಾವತ್ತಾಗಿ ಜಾರಿಗೆ ತರಲು ಮುಂದಾಗಬೇಕೆAದು ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾದಿಗ ಮುಖಂಡರಾದ ರವಿಚಂಧ್ರ ಕ್ರಾಂತಿಕಾರ, ಅನೀಲ ಡೋಂಗರಗಾAವ, ಯಲ್ಲಪ್ಪಾ ಮಾಳಗಿ, ಮಧುಕರ ಕಾಂಬಲೆ ಅವರುಗಳು ಉಪಸ್ಥಿತರಿದ್ದರು.
ಈ ವರದಿಯ ಜಾರಿಗಾಗಿ ಕಳೆದ 1992ರಿಂದ ಮಾದಿಗ ದಂಡೋರಾ ಸೇರಿದಂತೆ ಹಲವಾರು ಮಾದಿಗ ಸಮುದಾಯದ ಸಂಘಟನೆಗಳು ಹೋರಾಟ ನಡೆಸಿದ್ದು, ಈಗ ಈ ಹೋರಾಕ್ಕೆ ಮರುಜೀವ ಬಂದAತಾಗಿದೆ.
ರಾಜ್ಯದಾದ್ಯಂತ ಮಾದಿಗ ದಂಡೋರಾ ಹೋರಾಟ ಸಮಿತಿಯ ಅಧ್ಯಕ್ಷರಾಗಿದ್ದ ಮಾಪಣ್ಣ ಹದನೂರ ನೇತೃತ್ವದಲ್ಲಿ ಹಲವಾರು ಅರೆ ಬೆತ್ತಲೆ, ರಸ್ತಾ ರೋಕೋ, ಬೆಂಗಳೂರು ಚಲೋ, ವಿಧಾನಸೌಧ ಮುತ್ತಿಗೆ, ಬೆಳಗಾವಿಯಲ್ಲಿ ನಡೆಯುತ್ತಿದ್ದ ಅಧಿವೇಶನದ ವೇಳೆ ಮುತ್ತಿಗೆ ಚಳುವಳಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕಲಬುರಗಿಗೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ಸೇರಿದಂತೆ ಇನ್ನು ಹಲವಾರು ಮಾದಿಗ ಸಂಘಟನೆಗಳ ಹೋರಾಟ ನಡೆಸಿದ್ದು ಇಲ್ಲಿ ಸ್ಮರೀಸಬಹುದು.

LEAVE A REPLY

Please enter your comment!
Please enter your name here