ಕಸಾಪ ಸಮ್ಮೇಳನದ ಲೆಕ್ಕ ಇನ್ನೂ ಆಗಿಲ್ಲ ಪಕ್ಕಾ

0
823

ಕಲಬುರಗಿ, ಆಗಸ್ಟ. 28: ಕಳೆದ ಫೆಬ್ರವರಿ 5 ರಿಂದ ಮೂರು ದಿನಗಳ ಕಾಲ ಕಲಬುರಗಿಯಲ್ಲಿ ನಡೆದ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಜರುಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸಮ್ಮೇಳನ ಯಶಸ್ವಿಯಲ್ಲಿ ಕಲಬುರಗಿಯಿಂದ ವರ್ಗಾವಣೆಯಾಗಿರುವ ಜಿಲ್ಲಾಧಿಕಾರಿ ಬಿ. ಶರತ್ ಅವರ ಪಾತ್ರ ಪ್ರಮುಖವಾಗಿದೆ.
ಈಗ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾ ಗಿರುವುದು ಮೈಸೂರಿ ದಸರಾ ಉತ್ಸವ ಜವಾಬ್ದಾರಿ ವಹಿಸಲಿದ್ದಾರೆ.
ಕಲಬುರಗಿಯಲ್ಲಿ ನಡೆದಿರುವ ಸಾಹಿತ್ಯ ಸಮ್ಮೇಳನದ ಲೆಕ್ಕ ಇನ್ನು ಪೂರ್ಣಗೊಳಿಸಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಸಮ್ಮೇಳನದ ಖರ್ಚು ವೆಚ್ಚದ ಲೆಕ್ಕ ಮಂಡಿಸಿಲ್ಲ. ಹೀಗಾಗಿ ಮುಂಬರುವ ಜಿಲ್ಲಾಧಿಕಾರಿಯು ಲೆಕ್ಕದ ನಿರ್ವಹಣೆ ಪೂರ್ಣಗೊಳಿಸಬೇಕಾಗಿದೆ.
ಸಮ್ಮೇಳನದ ದೊಡ್ಡ ಖರ್ಚಿನ ಮೊತ್ತವನ್ನು ಪಾವತಿಸಲಾಗಿದೆ. ಸಣ್ಣ ಪುಟ್ಟ ಲೆಕ್ಕಗಳನ್ನು ಪಾವತಿಸಿ ಪೂರ್ಣಗೊಳಿಸಬೇಕಾಗಿದೆ.

LEAVE A REPLY

Please enter your comment!
Please enter your name here