ಕಲಬುರಗಿ, ಆಗಸ್ಟ. 26: ಪತ್ರಕರ್ತರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟಗಳನ್ನು ಮಾಡುತ್ತ ಪತ್ರಕರ್ತರ ತೇಜೋವಧೆಗೆ ಯತ್ನಿಸುತ್ತಿರುವ ಆರ್.ಟಿ.ಐ. ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ಅಷ್ಟೆ ಅಲ್ಲ ಇನ್ನು ಯಾರೇ ಇರಲೀ ಅಂಥವರನ್ನು ನಮ್ಮ ಸರಕಾರ ರಕ್ಷಿಸುವುದಿಲ್ಲ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್ ಅವರು ಖಡಾಖಂಡಿತವಾಗಿ ಹೇಳಿದರು.
ಅವರಿಂದಿಲ್ಲಿ ನಗರದ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ಇತ್ತೀಚೆಗೆ ಬೆಂಗಳೂರಿನ ಕೆಜೆ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಘಟನೆಯಲ್ಲಿ ತಪ್ಪಿತಸ್ಥರರಿಗೆ ಸರಕಾರ ಮೂಲಾಜಿಲ್ಲದೇ ಬಂಧಿಸಿ, ಶಿಕ್ಷೆಗೆ ಒಳಪಡಿಸಿದಂತೆ ಇಲ್ಲಿ ಅಲ್ಲ ಎಲ್ಲೆ ಪತ್ರಕರ್ತರ ಮೇಲೆ ಹಲ್ಲೆ ಅಥವಾ ಇಂತಹ ಘಟನೆ ನಡೆದರೆ ಕ್ರಮಕೈಗೊಳ್ಳಲು ಸರಕಾರ ಬದ್ಧವಾಗಿದೆ ಎಂದರು.
ಅದರಲ್ಲೂ ಸಿದ್ರಾಮಯ್ಯ ಹಿರೇಮಠ ಅವರು ನಮ್ಮ ಪಕ್ಷಕ್ಕೆ ಯಾವುದೇ ಸಂಬAಧವು ಇಲ್ಲ ಸ್ಪಷ್ಟಪಡಿಸಿದರು.