ಕಲಬುರಗಿ, ಆಗಸ್ಟ, 19: ಫಸಲ್ ಭೀಮಾ ಯೋಜನೆ ಹೆಸರಿನಲ್ಲಿ ಕೇಂದ್ರ ಸರ್ಕಾರ ರೈತರಿಗೆ ದೊಡ್ಡ ವಂಚನೆ ಮಾಡುತ್ತಿದೆ, ಈ ಹಿಂದೆ ಎನ್.ಡಿ.ಎ. ಸರಕಾರದಕ್ಕಿಂತ ಮುಂಚೆ ವಿಮೆ ಕಂಪನಿ ಸರಕಾರಿ ಪಾಲುದಾರಿಕೆಯಲ್ಲಿ ನಡೆಯುತ್ತಿದ್ದವು, ಈಗ ಮೋದಿ ನೇತೃತ್ವದ ಎನ್.ಡಿ.ಎ. ಸರಕಾರ ವಿಮಾಯನ್ನು ಖಾಸಗೀಕರಣ ಮಾಡಿದ ನಂತರ ದೇಶದಲ್ಲಿ ರೈತರಿಗೆ ಅನುಕೂಲವಾಗಿಲ್ಲ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಆರೋಪಿಸಿದರು.
ಇದರಿಂದಾಗಿ ರೈತರ ಹಣ ರಾಜ್ಯ ಮತ್ತು ಕೇಂದ್ರ ಸರಕಾರದ ವೈಫಲ್ಯದಿಂದಾಗಿ ಖಾಸಗೀಯವರ ಪಾಲಾಗುತ್ತಿದ್ದು, ಜಿಲ್ಲೆಯಲ್ಲಿ ಫಸಲ ಭೀಮಾ ಯೋಜನೆಯಡಿ ರೈತರು 2016-17 ಸಾಲಿನಿಂದ 200 ಕೋಟಿ ರೂಪಾಯಿ ಪ್ರೀಮಿಯಂ ಕಟ್ಟಿದ್ದಾರೆ. ಆದರೆ ರೈತರಿಗೆ ಕ್ಲೇಮ್ ಆದ್ದದ್ದು ಮಾತ್ರ 26 ಸಾವಿರ ಕೋಟಿ ರೂಪಾಯಿ ಮಾತ್ರ. ಇದರಿಂದ ಖಾಸಗಿ ಕಂಪನಿಗಳಿಗೆ 200 ಕೋಟಿ ರೂಪಾಯಿ ಲಾಭವಾಗಿದೆ. ಈ ಯೋಜನೆ ಆರಂಭಿಸುವುದರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಮಾ ಕಂಪನಿಗಳಿಗೆ ಬಹುದೊಡ್ಡ ಕೊಡುಗೆ ನೀಡುವುದರೊಂದಿಗೆ ರೈತರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿದರು.
ಕಳೆದ 4 ವರ್ಷದಲ್ಲಿ 45 ಸಾವಿರ ಕೋಟಿ ರೂ. ಸರಕಾರ ಮತ್ತು ರೈತರಿಂದ ಖಾಸಗಿ ವಿಮಾ ಕಂಪನಿಗೆ ಪ್ರಿಮಿಯಂ ಕಟ್ಟಿದ್ದು, ಅದರಲ್ಲಿ ಅರ್ಧದಷ್ಟು ಅಲ್ಲದ ಕೇವಲ 19 ಸಾವಿರ ಕೋಟಿ ರೂ. ಮಾತ್ರ ರೈತರಿಗೆ ವಿಮೆ ಖಾಸಗಿ ಕಂಪನಿಗಳು ನೀಡಿದ್ದು, ನೋಡಿದರೆ ಇದರಲ್ಲಿ ರೈತರಿಗೆ ಈ ಫಸಲ್ ಭೀಮಾ ಯೋಜನೆಯಿಂದ ಏನು ಲಾಭವಿಲ್ಲ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.