ಅಮವಾಸ್ಯೆಯಂದು ಘತ್ತರಗಿಯ ಶ್ರೀ ಭಾಗ್ಯವಂತಿ ದೇವಿ ದರ್ಶನ ನಿಷೇಧ

0
2019

ಕಲಬುರಗಿ, ಆಗಸ್ಟ. 17: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಅಫಜಲಪೂರ
ತಾಲೂಕಿನ ಘತ್ತರಗಿಯ ಶ್ರೀ ಭಾಗ್ಯವಂತಿ ದೇವಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ದಿನಾಂಕ 19.08.2020 ರ ಅಮಾವಾಸ್ಯೆ ದಿನದಂದು ಸಾರ್ವಜನಿಕ ದರ್ಶನವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳಾದ ಬಿ. ಶರತ್ ಅವರು ಆದೇಶ ಹೊರಡಿಸಿದ್ದಾರೆ.
ಅಫಜಲಪೂರ ತಾಲೂಕಿನ ಶ್ರೀ ಭಾಗ್ಯವಂತಿ ದೇವಸ್ಥಾನ ಘತ್ತರಗಾ ದೇವಾಲಯಕ್ಕೆ ಪ್ರತಿ ಅಮಾವಾಸ್ಯೆಯಂದು ನೆರೆಯ ರಾಜ್ಯಗಳಾದ ಮಹಾರಾಷ್ಟ್ರ., ತೆಲಂಗಾಣ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವರು, ದಿನಾಂಕ 19.08.2020 ಬುಧುವಾರ ಅಮಾವಸ್ತೆ ಸೆಯಿದ್ದು ಅಂದು ಸಾವಿರಾರು ಸಂಖ್ಯೆಯಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರನ್ನು ನಿಯಂತ್ರಿಸುವುದು ಹಾಗೂ ಸಾಮಾಜಿಕ ಅಂತರ ನಿರ್ವಹಣೆ ಮಾಡುವುದು ತುಂಬಾ ಕಷ್ಟವಾಗುತ್ತದೆ. ಪ್ರಯುಕ್ತ ದಿನಾಂಕ 19.08.2020 ರಂದು ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡದಂತೆ ನಿರ್ಭಂದ ಹೇರಲು ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಭಾಗ್ಯವಂತಿ ದೇವಸ್ಥಾನ ಘತ್ತರಗಾ ಹಾಗೂ ತಹಸೀಲ್ದಾರರು ಪ್ರಸ್ತಾವನೆ ಸಲ್ಲಿಸಿದ್ದರು.
ಕೋರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸಾರ್ವಜನಿಕ ದರ್ಶನ ನಿಷೇಧಿಸುವುದು ಅತ್ಯವಶ್ಯಕ ವಾಗಿರುವುದರಿಂದ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144 ರಡಿ ಈ ಆದೇಶವನ್ನು ಹೊರಡಿಸಲಾಗಿದೆ.

Total Page Visits: 2665 - Today Page Visits: 2

LEAVE A REPLY

Please enter your comment!
Please enter your name here