ಕಲಬುರಗಿ, ಆಗಸ್ಟ 17: ನಿಯಮ ಬಾಹೀರವಾಗಿ ಹಣ ಪಡೆದು, ಕಾನೂನು ಗಾಳಿಗೆ ತೂರಿ ಜಾಗೆಯನ್ನು 11ಬಿ ಕಟ್ಟಡ ಕಟ್ಟಲು ಅನುಮತಿ ನೀಡಿದ ತಾಲೂಕಿನ ಹಾಗರಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಮಲ್ಲಿಕಾರ್ಜುನ ಗಿರಿ ಅಮಾನತ್ತುಗೊಳಿಸ ಬೇಕೆಂದು ಪ್ರಜಾ ಪರಿವರ್ತನ ವೇದಿಕೆಯು ಆಗ್ರಹಿಸಿದೆ.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ರಮೇಶಕುಮಾರ ಬೆಳಕೋಟಿ ಅವರು ಇಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಇಲ್ಲಿ ಪಿಡಿಓ ದರಬಾರು ನಡೆಸುತ್ತಿದ್ದಾರೆ ಎಂದು ದೂರಿದರು.
ಸರಕಾರದ ನಿಯಮದಂತೆ 14.06.2013ಕ್ಕಿಂತ ಮುಂಚೆ ಜಮೀನು ಎನ್.ಎ. ಮಾಡಿ ಸಿದ್ದರೆ ಕಟ್ಟಡಕ್ಕಾಗಿ 11ಬಿ ಕೊಡಬಹುದಾಗುತ್ತು, ಆದರೆ 2013ರ ಜೂನ್ ನಂತರ ಯಾವುದೇ ಒಂದು ಜಮೀನನ್ನು ಸಹ ಎನ್.ಎ. ಮಾಡಿಸಿದ್ದರೆ ಅದು ಕಲಬುರಗಿ ನಗರಾಬಿವೃದ್ಧಿ ಪ್ರಾಧಿಕಾರದ ಅನುಮತಿ ಕಡ್ಡಾಯವಾಗಿರುತ್ತದೆ. ಒಂದು ವೇಳೆ 2013ರಕ್ಕಿಂತ ಮುಂಚೆ ಕೃಷಿಯೇತರ ಜಮೀನು ಎಂದು ಮಾಡಿದ್ದೇ ಇದ್ದರೆ ಆ ನಿವೇಶನಗಳನ್ನು ಕೂಡಾ 2013ರಕ್ಕಿಂತ ಮುಂಚೆಯೇ ಮಾರಾಟ ಮಾಡಬೇಕು. ಒಂದು ವೇಳೆ ಮಾಲೀಕರ ಹೆಸರಿನಲ್ಲಿ ಉಳಿದಿರುವ ಪ್ಲಾಟಗಳು ಇದ್ದರೆ ಅವು ಕೂಡ 11ಬಿ ಕೊಡಬಾರದೆಂದು ದಿನಾಂಕ 03.10.2017ರಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ನಿರ್ದೇಶನ ನೀಡಿದು, ಈ ಆದೇಶವು ಕೂ ಪಿಡಿಓ ಗಾಳಿಗೆ ತೂರಿ 11ಬಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಹಾಗರಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅಜಾದಪೂರ ಗ್ರಾಮದ ಸರ್ವೇ ನಂ. 111/1ಬಿ ಸುಮಾರು 60 ರಿಂದ 70 ನಿವೇಶನಗಳಿಗೆ ನಿಯಮಬಾಹೀರವಾಗಿ 11ಬಿ ನೀಡಿದ ದಾಖಲಾತಿಗಳಿದ್ದು, 1 ಪ್ಲಾಟಿಗೆ 50 ರೂ. ಪಡೆಯಬೇಕಾಗಿದ್ದರೂ ಕೂಡಾ ಪಿಡಿಓ 10 ರಿಂದ 15 ಸಾವಿರ ರೂ. ಪಡೆಯುತ್ತಿದ್ದಾರೆ ಎಂದು ಹೇಳಿದರು.
ಪಿಡಿಓ ಗಿಯವರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಇಲ್ಲದಿದ್ದರೆ ವೇದಿಕೆ ಬೀದಿಗಿಳಿದು ಪ್ರತಿಭಟನೆ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಾಗರಗಾ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶ ಎಸ್ ಹಾಗರಗಿ, ವೇದಿಕಯ ಪ್ರ.ಕಾರ್ಯದರ್ಶಿ ಅರುಣಕುಮಾರ ಹುಗ್ಗಿ, ಶರಭಸಪ್ಪಾ ಕೋರಿ ಅವರುಗಳು ಉಪಸ್ಥಿತರಿದ್ದರು.