ರಾಜ್ಯದಲ್ಲಿ ಬುಧುವಾರ 7883 ಜನರಿಗೆ ಕೋವಿಡ್ ಸೋಂಕು ಆಗಸ್ಟ್ ಅಂತ್ಯಕ್ಕೆ 3 ಲಕ್ಷಕ್ಕೆ ತಲುಪಲಿರುವ ರೋಗಿಗಳ ಸಂಖ್ಯೆ

0
843

ಬೆAಗಳೂರು, ಆ 12: ರಾಜ್ಯದಲ್ಲಿಯೇ ಇಂದು ಅತೀ ಹೆಚ್ಚು ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 7883 ಜನರಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ. ಇಷ್ಟು ಪ್ರಮಾಣದಲ್ಲಿ ಇಲ್ಲಿಯವರೆಗೆ ದಾಖಲಾಗಿರುವ ಅತಿ ಹೆಚ್ಚಿನ ಪ್ರಕರಣಗಳಾಗಿವೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.96 ಲಕ್ಷಕ್ಕೇರಿದೆ. ಬುಧವಾರ ಒಟ್ಟು 113 ಮಂದಿ ಮೃತಪಟ್ಟಿದ್ದು, ಇಲ್ಲಿಯವರೆಗೆ ಮಹಾಮಾರಿ ಕೋವಿಡ್‌ಗೆ 3518 ಮಂದಿ ಬಲಿಯಾಗಿದ್ದಾರೆ.
ಈ ನಡುವೆ, 7034 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಇದೂ ಕೂಡ ಇಲ್ಲಿಯವರೆಗೆ ದಾಖಲಾಗಿರುವ ಅತಿ ಹೆಚ್ಚಿನ ಚೇತರಿಕೆಯ ಪ್ರಮಾಣವಾಗಿದೆ. ದಿನದಿಂದ ದಿನಕ್ಕೆ ಗುಣಮಖರಾಗುತ್ತಿರುವ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡುಬರುತ್ತಿದೆ. ಇದೊಂದು ಒಳ್ಳೆಯ ಸಮಾಧಾನದ ಸಂಗತಿಯಾಗಿದೆ.
ಸೋAಕಿನಿAದ ಇಲ್ಲಿಯವರೆಗೆ ಒಟ್ಟು 1.12 ಲಕ್ಷ ಗುಣಮುಖರಾದಂತಾಗಿದೆ. ಸದ್ಯ ರಾಜ್ಯದಲ್ಲಿ 80,343 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 701 ಮಂದಿಗೆ ತೀವ್ರ ನೀಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು ನಗರದಲ್ಲಿ 2,802 ಮಂದಿಗೆ ಸೋಂಕು ತಗುಲಿದ್ದು, 23 ಬಲಿಯಾಗಿದ್ದಾರೆ. ಇಲ್ಲಿ ಒಟ್ಟು ಸೋಂಕಿತರ ಸಂಖ್ಯೆ 79840ಕ್ಕೇರಿಕೆಯಾಗಿದ್ದು, 33489 ಸಕ್ರಿಯ ಪ್ರಕರಣಗಳಿವೆ.
ಇನ್ನು ಉಳಿದಂತೆ ಬಳ್ಳಾರಿಯಲ್ಲಿ 635, ಮೈಸೂರಿನಲ್ಲಿ 544, ಬೆಳಗಾವಿಯಲ್ಲಿ 314, ಧಾರವಾಡದಲ್ಲಿ 269, ಉಡುಪಿಯಲ್ಲಿ 263, ಹಾಸನದಲ್ಲಿ 258, ದಾವಣಗೆರೆಯಲ್ಲಿ 239, ದಕ್ಷಿಣಕನ್ನಡದಲ್ಲಿ 229, ಕೊಪ್ಪಳದಲ್ಲಿ 202 ಪ್ರಕರಣಗಳು ವರದಿಯಾಗಿವೆ.
ರಾಯಚೂರಿನಲ್ಲಿ 191, ಬೆಂಗಳೂರು ಗ್ರಾಮಾಂತರದಲ್ಲಿ 182, ಬಾಗಲಕೋಟೆಯಲ್ಲಿ 170, ಗದಗದಲ್ಲಿ 148, ಕಲಬುರಗಿಯಲ್ಲಿ 144, ಹಾವೇರಿಯಲ್ಲಿ 132, ವಿಜಯಪುರ, ಮಂಡ್ಯ, ತುಮಕೂರಿನಲ್ಲಿ 121, ಯಾದಗಿರಿಯಲ್ಲಿ 107, ಬೀದರ್‌ನಲ್ಲಿ 91, ಉತ್ತರ ಕನ್ನಡದಲ್ಲಿ 84, ಚಿಕ್ಕಬಳ್ಳಾಪುರದಲ್ಲಿ 81, ಶಿವಮೊಗ್ಗದಲ್ಲಿ 69, ಚಾಮರಾಜನಗರದಲ್ಲಿ 68, ರಾಮನಗರದಲ್ಲಿ 63, ಚಿತ್ರದುರ್ಗದಲ್ಲಿ 61, ಕೋಲಾರದಲ್ಲಿ 33, ಕೊಡಗಿನಲ್ಲಿ 29 ಪ್ರಕರಣಗಳು ವರದಿಯಾದ ಬಗ್ಗೆ ಆರೋಗ್ಯ ಇಲಾಖೆ ಹೊರಡಿಸಿದ ಹೆಲ್ತ್ ಬುಲೇಟಿನ್‌ನಲ್ಲಿ ತಿಳಿಸಿದೆ.

Total Page Visits: 872 - Today Page Visits: 1

LEAVE A REPLY

Please enter your comment!
Please enter your name here