ಪತ್ರಕರ್ತರಿಗೆ ಅವಹೇಳನ: ಹಿರೇಮಠ ವಿರುದ್ಧ ಎಫ್ಐಆರ್

0
1848

ಕಲಬುರಗಿ: ಸರ್ಕಾರಿ ಕಚೇರಿಗೆ ನುಗ್ಗಿ ದಾಂಧಲೆ, ಕೊಂಚಾವರಂ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ವಿಷವುಣಿಸಿದ ಆರೋಪ ವಿರುದ್ಧ ಈಗಾಗಲೇ ದೂರು ದಾಖಲಾಗಿರುವ ನಡುವೆ ಪತ್ರಕರ್ತರಿಗೆ ಅವಹೇಳನಕಾರಿ ಹಾಗೂ ಮಾನಹಾನಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಆರ್ ಟಿಐ ಕಾರ್ಯಕರ್ತ ಸಿದ್ರಾಮಯ್ಯ ಎಸ್ ಹಿರೇಮಠ ಅಲಿಯಾಸ್ ಸಿದ್ದು ಹಿರೇಮಠ ವಿರುದ್ಧ ಇಲ್ಲಿನ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಪತ್ರಕರ್ತರು ಲೂಟಿಕೋರರು, ಭೃಷ್ಟರು, ಇವರೇನು ಸಾಚಾನಾ? ಎಂಬಿತ್ಯಾದಿ ಮಾನಹಾನಿ, ಅವಹೇಳನಕಾರಿ ಹಾಗೂ ಮಾನಸಿಕ ಹಿಂಸೆ ನೀಡುವಂತಹ ಹೇಳಿಕೆಗಳನ್ನು ವಾಟ್ಸ್ಯಾಪ್ ಹಾಗೂ ಫೆಸ್ ಬುಕ್ ನಿರಂತರವಾಗಿ ಪೊಸ್ಟ್ ಮಾಡುತ್ತಾ ಬರಲಾಗುತ್ತಿದೆ ಎಂಬುದರ ಕುರಿತಾಗಿ ದಾಖಲೆಗಳ ಸಮೇತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ದೂರು ನೀಡಿರುವುದನ್ನು ಪರಿಗಣಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ತಮಗೆ ಸಂಬಂಧ ಇಲ್ಲದ ವಿಷಯಗಳನ್ನು ಸಂಘದೊಂದಿಗೆ ತಳಕು ಹಾಕುವ ಜತೆಗೆ ಪತ್ರಕರ್ತರನ್ನು ಮಾನಹಾನಿಗೊಳಿಸುವ ಏಕೈಕ ಉದ್ದೇಶ ಪೊಸ್ಟ್ ಗಳು ನಿರೂಪಿಸುತ್ತವೆ. ಇದಕ್ಕೆ ಈ ಹಿಂದೆ ಈಗಾಗಲೇ ದಾಖಲಾಗಿರುವ ಎಫ್ ಎಫ್ಐಆರ್ ಗಳೇ ಸಾಕ್ಷಿ ಯಾಗಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಯಾವುದೇ ಅಧಿಕಾರಿಗಳ ವಿರುದ್ಧ ಇಲ್ಲದ ಸಲ್ಲದ ಆರೋಪಗಳ ಕುರಿತು ಹೇಳಿಕೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಾ, ಜತೆಗೇ ಅದನ್ನು ಸಂಬಂಧಿಸಿದವರಿಗೆ ವಾಟ್ಸ್ಯಾಪ್ ಮ‌ೂಲಕ ತಿಳಿಸುತ್ತಾ, ತಮ್ಮೊಂದಿಗೆ ಸಹಕರಿಸದಿದ್ದರೆ ಸುದ್ದಿ ಬರುತ್ತದೆ ಎಂಬಿದಾಗಿ ಬೆದರಿಸುವ ಮುಖಾಂತರ ಮಾಧ್ಯಮ ಕ್ಷೇತ್ರವನ್ನು ವಂಚಿಸಲಾಗಿದೆ. ಒಟ್ಟಾರೆ ಸಂವಿಧಾನದ ನಾಲ್ಕನೇ ಅಂಗವಾಗಿರುವ ಇಡೀ ಪತ್ರಕರ್ತರ ಬಳಗವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಜತೆಗೆ ಇತರ ಹತ್ತಾರು ನಿಟ್ಟಿನಲ್ಲಿ ಪತ್ರಕರ್ತರನ್ನು ಅಂಕೆ ಇಲ್ಲದಂತೆ ಮಾನಹಾನಿಗೊಳಿಸಲಾಗಿದೆ ಎಂದು ಮೊಕದ್ದಮೆ ದಾಖಲಾಗಿದೆ. ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿ ಸಿಂಗ್ ಠಾಕೂರ ಹಾಗೂ ಸಂಘದ ಸರ್ವ ಪದಾಧಿಕಾರಿಗಳು ಮತ್ತು ಸದಸ್ಯರು ದೂರು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here