ಮಾಜಿ ಸಚಿವ ಜಿ. ರಾಮಕೃಷ್ಣ ನಿಧನ

0
1085

ಕಲಬುರಗಿ, ಆಗಸ್ಟ. ೯: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಧುರೀಣರಾಗಿದ್ದ ಜಿ. ರಾಮಕೃಷ್ಣ ಅವರು ಇಂದು (ರವಿವಾರ) ನಿಧನ ಹೊಂದಿದ್ದಾರೆ.
ಅವರಿಗೆ ೮೪ ವರ್ಷ ವಯಸ್ಸಾಗಿತ್ತು. ಸಹಜ ವಯೋ ಕಾಯಿಲೆಯಿಂದ ನಿಧನ ಹೊಂದಿದ ಅವರು ಹಲವಾರು ಬಾರಿ ಶಾಸಕರಾಗಿ, ಸಚಿವರಾಗಿ, ಅಲ್ಲದೇ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರಾಗಿ ಪಕ್ಷಕ್ಕಾಗಿ ಹಾಗೂ ತಮ್ಮ ಕ್ಷೇತ್ರದ ಮತದಾರರಿಗಾಗಿ ದುಡಿದ ಹಿರಿಯ ಜೀವವಾಗಿದ್ದರು.
ದಿವಂಗತರು ಮೂವರು ಗಂಡು ಮಕ್ಕಳು ಹಾಗೂ ಪತ್ನಿ ಹಾಗೂ ಅಪಾರ ಬಂಧುಗಳನ್ನು ಬಿಟ್ಟು ಅಗಲಿದ್ದಾರೆ.
೧೯೮೯ರಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್ ಅವರ ಸಂಪುಟದಲ್ಲಿ ೧೯೮೯ ರಿಂದ ೧೯೯೦ರ ವರೆಗೆ ವೈದ್ಯಕೀಯ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ ಅವರು ನಂತರ ಮತ್ತೆ ೨೦೧೩ರಲ್ಲಿ ಕಮಲಾಪೂರ ಮತಕ್ಷೇತ್ರದಿಂದ ಶಾಸಕರಾಗಿ ಮತ್ತೆ ಆಯ್ಕೆಯಾಗಿದ್ದರು.
ದಿವಂಗತರ ಅಂತ್ಯಕ್ರಿಯೇಯು ನಾಳೆ ಸೋಮವಾರ ಮಧ್ಯಾಹ್ನ ನಡೆಯಲಿದೆ.

LEAVE A REPLY

Please enter your comment!
Please enter your name here