ಶುಕ್ರವಾರದವರೆಗೆ ಮದ್ಯ ಮಾರಾಟ ನಿಷೇಧ

0
980

ಕಲಬುರಗಿ, ಆಗಸ್ಟ. 04: ಬುಧುವಾರ ದಿನಾಂಕ 4.8.2020ರಂದು ಅಯೋಧೆಯಲ್ಲಿ ಶ್ರೀ ರಾಮ ಮಂದಿರದ ಶಂಕುಸ್ಥಾಪನೆ ಪ್ರಯುಕ್ತ ನಗರದಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಯಿAದ ಗುರುವಾರ ಬೆಳಿಗ್ಗೆ 6.00 ಗಂಟೆಯ ವರೆಗೆ ಎಲ್ಲ ತರಹದ ಮದ್ಯ ಮಾರಾಟವನ್ನು ಜಿಲ್ಲೆಯಾದ್ಯಂತ ನಿಷೇಧಿಸಿ ಆದೇಶ ಜಾರಿ ಮಾಡಿದ್ದಾರೆ.
ಎಲ್ಲ ತರಹದ ಸಗಟು ಮದ್ಯ ಮಾರಾಟ ಮತ್ತು ಬಾರ್ ರೆಸ್ಟೋರೆಂಟ್‌ಗನ್ನು ಬಂದ್ ಮಾಡಲು ಜಿಲ್ಲಾ ದಂಡಾಧಿಕಾರಿಗಳಾದ ಶರತ್ ಬಿ. ಅವರು ಆದೇಶ ಹೊರಡಸಿದ್ದಾರೆ.
ಶ್ರೀ ರಾಮ ಮಂದಿರದ ಶಿಲಾನ್ಯಾಸ ಹಾಗೂ ಶಂಕುಸ್ಥಾಪನೆಯ ಸಲುವಾಗಿ ಭೂಮಿಪೂಜೆ ನಡೆಯುವ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಕಲಂ 144 ಅನ್ವಯ ದಿನಾಂಕ 4.8.2020ರಿಂದ ದಿನಾಂಕ 6.8.2020ರ ವರೆಗೆ ನಿಷೇದಾಜ್ಞೆಯನ್ನು ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here