ಕಲಬುರಗಿಯಲ್ಲಿ ವ್ಯಾಪಾರಸ್ಥರಿಗೆ ಆ್ಯಂಟಿಜೆನ್ ಪರೀಕ್ಷೆ ಮಾಡಬೇಕು

0
1391

ಕಲಬುರಗಿ, ಅಗಸ್ಟ 01: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಹಾಮಾರಿ ಕೊರೊನಾ ಹತೋಟಿಗೆ ಬರುವುದೇನೋ ಕಾಣುತ್ತಿಲ್ಲ. ದಿನ ನಿತ್ಯ ಬಿಂದಾಸ ಆಗಿ ವ್ಯಾಪರದಲ್ಲಿ ಮಾಸ್ಕ ಇಲ್ಲದೇ ತೊಡಗುತ್ತಿರುವ ವ್ಯಾಪಾರಸ್ಥರಿಗೆ ಆ್ಯಂಟಿಜೆನ್ ಪರೀಕ್ಷೆ ಮಾಡಿಸಿ, ಜನರಿಗೆ ಒಬ್ಬರಿಂದ ಹರಡುವ ಕೊರೊನಾ ತಡೆಗೆ ಮುಂದಾಗಬೇಕು ಜಿಲ್ಲಾಡಳಿತ.
ನಗರದ ಹಲವಾರು ಕಡೆಗಳಲ್ಲಿ ಹಣ್ಣು, ಹೂ, ತರಕಾರಿ, ದಿನಸಿ ಅಂಗಡಿ, ಹೆಚ್ಚು ವಹಿವಾಟು ಇರುವ ಮಳಿಗೆಗಳಲ್ಲಿನ ಮಾಲಿಕರಿಗೆ ಹಾಗೂ ನೌಕರರಿಗೆ ಆಂಟಿಜೆನ್ ಟೆಸ್ಟ್ ಮಾಡಿದರೆ ಒಳ್ಳೆಯದು.
ಈಗಾಗಲೇ ಧಾರವಾಡ, ಹುಬ್ಬಳ್ಳಿ ನಗರದಲ್ಲಿ ಇಂಥಹದ್ದೇ ಪರೀಕ್ಷೆ ಮಾಡುತ್ತಿದ್ದು, ಸುಮಾರು ಒಂದು ದಿನಕ್ಕೆ 10-115 ಕೊರೊನಾ ಪಾಸಿಟಿವ್ ಇರುವ ವ್ಯಾಪಾರಸ್ಥರು ಪತ್ತೆಯಾಗಿದ್ದು ಇಲ್ಲಿ ಸ್ಮರಿಸಬಹುದಾಗಿದೆ.
ಇದೇ ಮಾದರಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿಯೂ ಕೂಡಾ ಆಂಟಿಜೆನ್ ಪರೀಕ್ಷೆ ನಡೆಸಿದ್ದಲ್ಲಿ ಹೆಚ್ಚುತ್ತಿರುವ ಕೊರೊನಾ ಸಾರ್ವಜನಿಕವಾಗಿ ಹರಡವುದು ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here