ರಾಜ್ಯದಲ್ಲಿ ಇಂದು 5536 ಜನರಿಗೆ ಕೊರೊನಾ ಸೋಂಕು, 102 ಜನರ ಸಾವು

0
822

ಬೆಂಗಳೂರು, ಜು. 28: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕು ಹೊಸದಾಗಿ 5536 ಜನರಿಗೆ ವಕ್ಕರಿಸಿದ್ದು, 102 ಜನರು ಈ ಸೋಂಕಿಗೆ ಇಂದು ಬಲಿಯಾಗಿದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ 2055 ಜನರು ಸಾವಿಗೀಡಾಗಿದ್ದಾರೆ.
ಒಟ್ಟು ಇಂದಿನ ಸೋಂಕಿತರು ಸೇರಿದಂತೆ 1 ಲಕ್ಷ 7 ಸಾವಿರ ಜನರಿಗೆ ಕೊರೊನಾ ಸೋಂಕು ವಕ್ಕರಿಸಿದಂತಾಗಿದೆ.
ಮಂಗಳವಾರ ಆಸ್ಪತ್ರೆಯಿಂದ 2819 ಜನರು ಬಿಡುಗಡೆಗೊಂಡಿದ್ದು, ಇಲ್ಲಿಯವರೆಗೆ 40504 ಜನರು ಡಿಸ್ಸಾರ್ಚ ಆಗಿದ್ದಾರೆ.
64434 ರಾಜ್ಯದಲ್ಲಿ ಸಕ್ರೀಯ ಪ್ರಕರಣಗಳಿದ್ದು, ಒಟ್ಟು ಸೋಂಕಿತರದಲ್ಲಿ ಶೇ. 42% ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ತೀವ್ರ ನಿಗಾ ಘಕಟದಲ್ಲಿ 612 ಜನರು ಚಿಕಿತ್ಸೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳ ಆಸ್ಪತ್ರೆಯಲ್ಲಿದ್ದು, ಕೋವಿಡ್ ಅಲ್ಲದೇ ವಿವಿಧ ರೋಗಗಳಿಂದ ಇಲ್ಲಿಯವರೆಗೆ 8 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ಒಂದರಲ್ಲೆ ಇಂದು 40 ಜನರು ಈ ಸೋಂಕಿಗೆ ಬಲಿಯಾಗಿದ್ದು, ಮೈಸೂರಿನಲ್ಲಿ 8 ಮತ್ತು ಕಲಬುರಗಿಂ, ಬೆಳಗಾವಿ, ಧಾರವಾಡಗಳಲ್ಲಿ 6 ಜನರು ಸಾವಿಗೀಡಾಗಿದ್ದು, ಉಡುಪಿಯಲ್ಲಿ 7, ಜನರು, ಹಾನದಲ್ಲಿ 5, ದಾವಣಗೇರೆಯಲ್ಲಿ 4, ದಕ್ಷಿಣ ಕನ್ನಡದಲ್ಲಿ 3 ಜನರು ಸಾವಿಗೀಡಾಗಿದ್ದಾರೆ. ಉಳಿದಂತೆ ತುಮಕೂರು, ಕೋಲಾರ, ವಿಜಯಪುರ, ಕೊಪ್ಪಳ, ರಾಯಚೂರುಗಳಲ್ಲಿ ಒಬ್ಬೊಬ್ಬರು ಬಲಿಯಾಗಿದ್ದು, ಬಾಗಲಕೋಟೆಯಲ್ಲಿ 2 ಜನರು ಸೋಂಕು ತಗುಲಿ ಸಾವನ್ನಪ್ಪಿದ್ದಾರೆ.
ಕಳೆದ 15 ದಿನಗಳಿಂದ ಬೆಂಗಳೂರಿಗೆ ಈ ಕೊರೊನಾ ಬೆಂಬಡಿದ ಭೂತದಂತೆ ಕಾಡುತ್ತಿದ್ದು, ಇಲ್ಲಿ ಇಂದು 1898 ಜನರಿಗೆ ಕೊರೊನಾ ವಕ್ಕರಿಸಿದ್ದು, ಬಳ್ಳಾರಿಯಲ್ಲಿ 452, ಕಲಬುರಗಿಯಲ್ಲಿ 283, ಬೆಳಗಾಂವ 228, ಮೈಸೂರು 220, ತುಮಕೂರು 207, ಕೊಲಾರ 174, ದಕ್ಷಿಣ ಕನ್ನಡ 173, ಧಾರವಾಡ 173, ವಿಜಯಪುರ 153, ಕೊಪ್ಪಳ 144, ದಾವಣಗೆರೆ 135, ಬಾಗಲಕೋಟೆ 115, ಉಡುಪಿ 109, ಹಾಸನ 108, ಬೆಂಗಳೂರು ಗ್ರಾಮಾಂತರ 107, ರಾಮನಗರ 101, ಮಂಡ್ಯ 96, ರಾಯಚೂರು 93, ಗದಗ 73, ಚುಕ್ಕಬಳ್ಳಾಪೂರ 72, ಯಾದಗಿರ 67, ಚಿತ್ರದುರ್ಗ 66, ಚಿಕ್ಕಮಗಳೂರು 55, ಶಿವಮೊಗ್ಗೆ 54, ಚಾಮರಾಜನಗರ 52, ಉತ್ತರ ಕನ್ನಡ 47, ಹಾವೇರಿ 40, ಬೀದರ 39, ಕೊಡಗು 2 ಜನರಿಗೆ ಸೋಂಕು ತಗುಲಿದೆ.

LEAVE A REPLY

Please enter your comment!
Please enter your name here