ಬುಧುವಾರದಿಂದ ಕಲಬುರಗಿಯಲ್ಲಿ ಲಾಕ್‌ಡೌನ್ ಇಲ್ಲ

0
892

ಕಲಬುರಗಿ, ಜುಲೈ. 21: ಕಲಬುರಗಿ ಜಿಲ್ಲೆಯಲ್ಲಿ ಘೋಷಿಸಲಾಗಿದ್ದ ಜುಲೈ 27ರ ವರೆಗಿನ ಲಾಕ್‌ಡೌನ್ ಆದೇಶ ಹಿಂದಕ್ಕೆ ಪಡೆಯಲಾಗಿದೆ.
ಕಳೆದ 14ರಿಂದ ಒಂದುವಾರ ಕಾಲ ಕಲಬುರಗಿ ಜಿಲ್ಲೆಯಲ್ಲಿ ಲಾಕ್‌ಡೌನ್ ಜುಲೈ 27ರ ವರೆಗೆ ಮುಂದುವರೆಸಿ ಮೊನ್ನೆಯಷ್ಟ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.
ಇಂದು ಮತ್ತೇ ನೀಡಿದ ಆದೇಶವನ್ನು ಜಿಲಾಧಿಕಾರಿಗಳಾದ ಶರತ್ ಬಿ. ಅವರು ಹಿಂಪಡೆದು ಆದೇಶ ಹೊರಡಿಸಿದ್ದಾರೆ.
ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರು ಸಂಜೆ ರಾಜ್ಯವನ್ನುದ್ದೇಶಿ ಸಿ ಮಾತನಾಡುತ್ತ, ರಾಜ್ಯದಲ್ಲಿ ಎಲ್ಲಿಯೂ ಲಾಕ್‌ಡೌನ್ ಮುಂದುವರೆಸಲ್ಲ, ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಒಂದೇ ಪರಿ ಹಾರವಲ್ಲ, ಇದು ಬಿಟ್ಟಿ ಬೇರೆಯೇನಾದರೂ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದು ಖಡಕವಾಗಿ ಹೇಳಿದ್ದು, ಅಲ್ಲದೇ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಕೂಡಲೇ ಯಾವ ಯಾವ ಜಿಲ್ಲೆಯಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆಯೇ ಈ ಕೂಡಲೇ ವಾಪಸ್ಸು ಪಡೆದು, ಮತ್ತೇ ರಾಜ್ಯದಾದ್ಯಂತ ಸುಗಮವಾಗಿ ನಾಳೆ (ಬುಧುವಾರ) ದಿಂದ ವ್ಯಾಪಾರ ವಹಿವಾಟು, ಮತ್ತು ಬಸ್, ಆಟೋ ಸಂಚಾರ, ಕ್ಯಾಬ್ ಸಂಚಾರಕ್ಕೆ ಅನು ವುಮಾಡಿಕೊಡಲು ಆದೇಶಿಸಿದ್ದಾರೆ.
ಬುಧುವಾರದಿಂದ ಬಾರ್, ವೈನ್ಸ್ ಶಾಪ್ ಗಳು, ಎಂಎಸ.ಐಎಲ್‌ಗಳು ಎಂದಿನAತೆ ಪ್ರಾರಂಭವಾಗಲಿವೆ.
ಮಾಲ್, ಡಿಪಾರ್ಟಮೆಂಟ್‌ಲ ಸ್ಟೊರ‍್ಸ, ಸೇರಿದಂತೆ ಎಲ್ಲ ತರಹದ ಅಂಗಡಿ ಮುಂ ಗಟ್ಟುಗಳು ತೆರೆಯಲಿದ್ದು, ಎಂದಿನAತೆ ವ್ಯಾ ಪಾರ ವಹಿವಾಟು ನಡೆಯಲಿದೆ.

LEAVE A REPLY

Please enter your comment!
Please enter your name here