ಕಲಬುರಗಿಯಲ್ಲಿ 6ನೇ ದಿನವೂ ಸಂಪೂರ್ಣ ಲಾಕ್‌ಡೌನ್

0
1564

ಕಲಬುರಗಿ, ಜುಲೈ. 19: ಕಿಲ್ಲರ್ ಕೊರೊನಾ ಸೋಂಕು ಸಮುದಾಯಗಳಲ್ಲಿ ಹರಡದಿರಲು ಹಾಗೂ ಕೊರೊನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕಳೆದ 6 ದಿನಗಳಿಂದ ಲಾಕ್‌ಡೌನ್ ಸಂಪೂರ್ಣ ಯಶಸ್ವಿಯಾಗಿದೆ.
ಅವಶ್ಯಕ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ದಿನಸಿ ಅಂಗಡಿಗಳು ಬಿಟ್ಟಿರೆ ಎಲ್ಲ ಅಂಗಡಿಗಳು ಸಂಪೂರ್ಣ ಲಾಕ್ ಆಗಿದ್ದವು, ಪೆಟ್ರೋಲ್ ಪಂಪ್‌ಗಳುಗಳೂ ಸರಕಾರದ ಮಾರ್ಗಸೂಚಿಗಳಂತೆ ಕಾರ್ಯನಿರ್ವಹಿಸಿ, ಕರಾರುವಾಕ್ಯವಾಗಿ ಮಧ್ಯಾಹ್ನ 2ಕ್ಕೆ ಮುಚ್ಚಿದ್ದು ಎಲ್ಲಡೆ ಕಂಡುಬAದಿತು.
ಬಡಾವಣೆಗಳಿAದ ಹಿಡಿದು ಮುಖ್ಯರಸ್ತೆ, ರಿಂಗ್ ರಸ್ತೆಗಳಲ್ಲಿ ಎಲ್ಲ ಕಡೆ ಪೋಲಿಸ್‌ರ ಬಂದೋಬಸ್ತ ಉತ್ತಮವಾಗಿತ್ತು, ಅದರಲ್ಲೂ ಸಂಚಾರಿ ಪೋಲಿಸರು ವಾಹನಗಳು ತಡೆದು ಅಲ್ಲಲ್ಲಿ ತಪಾಸಣೆ ನಡೆಸುತ್ತಿರುವುದು ಬಹುತೇಕ ಎಲ್ಲ ಕಡೆ ಕಂಡುಬAದಿತು.
ನಗರದ ಗೋವಾ ಹೋಟೆಲ್ ಹತ್ತಿರ ಹಾಗೂ ಗಂಗಾನಗರದ ಹನುಮಾನ ಮಂದಿರ ಎದುರುಗಡೆ ಎರಡು ಕಟಿಂಗ್ ಶಾಪೀಗಳು ತೆರೆದಿದ್ದು, ಅವುಗಳ ವಿರುದ್ಧ ಪ್ರಕರಣ ದಾಖಲಿಸಿ, ಅಲ್ಲಿದ್ದವರ ಸಮೇತ ಅಂಗಡಿ ಮಾಲೀಕರುಗಳಿಗೆ ಪೋಲಿಸರು ಲಾಠಿ ರುಚಿ ತೋರಿಸುವ ಮೂಲಕ ಅಂಗಡಿ ಬಂದ್ ಮಾಡಿಸಿದರು.
ಸ್ಟೇಷನ್ ಬಜಾರ, ಚೌಕ್ ಠಾಣೆ, ಬ್ರಹ್ಮಪೂರ, ಆರ್.ಜಿ. ನಗರ ಸೇರಿದಂತೆ ಗ್ರಾಮೀಣ ಪೋಲಿಸ್‌ರು ತಮ್ಮ ಕಾರ್ಯವ್ಯಾಪ್ತಿಗಳಲ್ಲಿ ಕಾರ್ಯನಿರ್ವಹಿಸಿಸುವ ಮೂಲಕ ಲಾಕ್‌ಡೌನ್ ಸಮಯದಲ್ಲಿ ಯಾರು ಸುಮ್ಮ ಸುಮ್ಮನೆ ಮನೆಯಿಂದ ಹೊರಬಂದರೆ ಅಂಥವರಿಗೆ ಲಾಠಿ ಏಟು ಹಾಕುತ್ತಿದ್ದರು.

LEAVE A REPLY

Please enter your comment!
Please enter your name here