ಲಾಕ್‌ಡೌನ್ ಮಧ್ಯೆಯೂ ಮಧ್ಯಾಹ್ನ 2ರ ವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ

0
1693

ಕಲಬುರಗಿ, ಜುಲೈ 18: ಜಿಲ್ಲೆಯಲ್ಲಿ ಜುಲೈ 20ರ ವರೆಗೆ ಆದೇಶಿಸಲಾಗಿದ್ದ ಲಾಕ್‌ಡೌನ್ ಸಮಯದಲ್ಲಿ ಕೆಲವು ಅವಶ್ಯಕ ಸೇವೆಗಳಿಗೆ ಅನ್ವಯಿಸದಂತೆ ಎಲ್ಲ ಅಂಗಡಿ ಮುಂಗಟ್ಟುಗಳು, ವ್ಯಾಪಾರ ಮಳಿಗೆಗಳು ಸಂಪೂರ್ಣ ಮುಚ್ಚಲು ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶಕ್ಕೆ ಈಗ ತಿದ್ದುಪಡಿ ಮಾಡಲಾಗಿದ್ದು, ಮಧ್ಯಾಹ್ನ 2.00 ಗಂಟೆಯವರೆಗೆ ಎಲ್ಲ ವ್ಯಾಪಾರ ಮಳಿಗೆಗಳು ತಮ್ಮ ವ್ಯವಹಾರ ನಡೆಸಲು ಆದೇಶ ಹೊರಡಿಸಲಾಗಿದೆ.
ಪೆಟ್ರೋಲ್ ಪಂಪ್‌ಗಳು ಮತ್ತು ಇತರೆ ವ್ಯಾಪಾರ ವಹಿವಾಟಿಗೆ ಬೆಳಿಗ್ಗೆ 6.00 ರಿಂದ ಮಧ್ಯಾಹ್ನ 2.00 ರ ವರೆಗೆ ಮುಂದಿನ ಆದೇಶದ ವರೆಗೆ ಅನುಮತಿಸಿ ಜಿಲ್ಲಾಧಿಕಾರಿಗಳು ತಿದ್ದುಪಡಿ ಆದೇಶ ಹೊರಡಿಸಿದ್ದಾರೆ.
ನಿನ್ನೆ 17.07.2020ರಂದು ಜಿಲ್ಲಾಧಿಕಾರಿಗಳು ಈ ತಿದ್ದುಪಡಿ ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here