ರಾಜ್ಯದಲ್ಲಿ ಗುರುವಾರ ದಾಖಲೆಯ 4169 ಕೊರೊನಾ ಪ್ರಕರಣಗಳು

0
904

ಬೆಂಗಳೂರು, ಜುಲೈ. 16: ರಾಜ್ಯದಲ್ಲಿ ದಿನೇದಿನೆ ಕೊರೊನಾ ತನ್ನ ದಾಖಲೆಗಳನ್ನು ಬರೆಯುತ್ತ ಹೋಗುತ್ತಿದ್ದು, ಮೊನ್ನೆಯವರೆಗೆ ಇದ್ದ ದಾಖಲೆಯ ಸಂಖ್ಯೆ ಮೀರಿ ಇಂದು 4169 ಜನರಿಗೆ ಸೋಂಕು ತಗುಲಿ ಹೊಸ ದಾಖಲೆ ನಿರ್ಮಿಸಿದೆ.
ಬೆಂಗಳೂರಿನಲ್ಲಿಯೇ ಅತಿ ಹೆಚ್ಚು 2344 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 70 ಜನರು ಈ ರೋಗಕ್ಕೆ ಬಲಿಯಾಗಿದ್ದು ಕೂಡಾ ಈವರೆಗೆನ ದಾಖಲೆಯಾಗಿದೆ.
ಇಂದು ದಾಖಲೆಯ ಪ್ರಕರಣಗಳು ಸೇರಿದಂತೆ 51412 ಒಟ್ಟು ಕೊರೊನಾ ಸೋಂಕಿತರಿದ್ದು, ಇದರಲ್ಲಿ ಇಂದು 1263 ಜನರು ಸೇರಿದಂತೆ ಒಟ್ಟು ರಾಜ್ಯದಲ್ಲಿ 19729 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ರಾಜ್ಯದಲ್ಲಿ ಇಂದು ಒಟ್ಟು 104 ಜನರು ಸಾವನ್ನಪ್ಪಿದ್ದು, ಇದರಲ್ಲಿ ಬೆಂಗಳೂರು ನಗರದ ಬಹು ಪಾಲು ಆಗಿದ್ದು, ಒಂದAಕ್ಕಿಯಲ್ಲಿ ಬಲಿಯಾಗಿವೆ.
ರಾಜ್ಯದಲ್ಲಿ ಈವರೆಗೆ 1032 ಜನರು ಮಾರಕ ಸೋಂಕು ಕೊರೊನಾಗೆ ಬಲಿಯಾಗಿದ್ದಾರೆ.
ಅಲ್ಲದೇ ಐಸಿಯುನಲ್ಲಿ 539 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ.
ಕರ್ನಾಟಕ 3ನೇ ಸ್ಥಾನದಲ್ಲಿ
ಇಂದು ಪತ್ತೆಯಾದ 4169 ಹೊಸ ಕೊರೊನಾ ಪ್ರಕರಣಗಳು ಸೇರಿದಂತೆ ಕರ್ನಾಟಕ ದೇಶದಲ್ಲಿಯೇ ಅತೀ ಹೆಚ್ಚು ಕೊರೊನಾ ರೋಗಿಗಳ ಸಕ್ರೀಯ ಪ್ರಕರಣಗಳಲ್ಲಿ 3ನೇ ರಾಜ್ಯದ ಸ್ಥಾನದ ಪಟ್ಟಿಯಲಿದ್ದು,
ಮೊದಲು ಸ್ಥಾನ ಮಹಾರಾಷ್ಟç, ಎರಡನೇ ಸ್ಥಾನ ತಮಿಳುನಾಡು ಮತ್ತು ಮೂರನೇ ಸ್ಥಾನ ಕರ್ನಾಟಕ. ಒಂದು ಹಂತದಲ್ಲಿ ಕರ್ನಾಟಕ ರಾಜ್ಯ 12 ಸ್ಥಾನದಲ್ಲಿತ್ತು ಈಗ ಅದು ಮೂರನೇ ಸ್ಥಾನಕ್ಕೆ ಇಳಿದಿದ್ದು ನೋಡಿದರೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ನಿಯಂತ್ರಣ ಹತೊಟ್ಟಿಯಲ್ಲಿ ಬರದೆ ಇರುವುದು ಒಂದು ಕಡೆಯಾದರೆ ರೋಗ ಗುಣಮುಖವಾಗುವ ರೋಗಿಗಳ ಸಂಖ್ಕೆಯು ಇಳಿಕೆಯಾಗಿದೆ.
ದೆಹಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಕರ್ನಾಟಕಕ್ಕಿಂತ ಹೆಚ್ಚಿದ್ದರೂ ಕೂಡಾ ಅಲ್ಲಿ ಸಕ್ರೀಯ ಪ್ರಕರಣಗಳು 17 ಸಾವರಿಕ್ಕೆ ಇದೆ.
ದೆಹಲಿ ಮಾದರಿಯಲ್ಲಿ ಕರ್ನಾಟಕ ಕೂಡಾ ಕಾರ್ಯಮುಖವಾಗಿ ಕೊರೊನಾ ರೋಗಿಗಳ ಸೋಂಕು ನಿಯಂತ್ರಣಕ್ಕೆ ದಿಟ್ಟ ಕ್ರಮಗಳನ್ನು ತೆಗೆದುಕೊಂಡರೆ ಮಾತ್ರ ಈ ರೋಗ ಹತೋಟಿಗೆ ಸಾಧ್ಯ.

LEAVE A REPLY

Please enter your comment!
Please enter your name here