ಕಲಬುರಗಿಯಲ್ಲಿ ಗುರುವಾರ 123 ಜನರಿಗೆ ಕೊರೊನಾ ಸೋಂಕು, ಓರ್ವ ಬಲಿ

0
764

ಕಲಬುರಗಿ, ಜುಲೈ 16: ಲಾಕ್‌ಡೌನ್ ನಡುವೆಯೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗದೆ ದಿನೇದಿನೆ ಹೆಚ್ಚುತ್ತಿದ್ದು ಇಂದು ಸಹ ಗುರುವಾರ 123 ಕೊರೊನಾ ಸೋಂಕಿನ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.
ಒಟ್ಟು ಇಲ್ಲಿಯವರೆಗೆ 2503 ಜನರು ಕೊರೊನಾ ಮಹಾಮಾರಿ ಸೋಂಕಿನಿAದ ಬಳಲುತ್ತಿದ್ದು, ಅವರಲ್ಲಿ ಇಂದು 5 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದು ಸೇರಿ ಒಟ್ಟು ಇಲ್ಲಿಯವರೆಗೆ 1525 ಜನರು ಡಿಸ್ಚಾರ್ಜ ಆಗಿದಂತಾಗಿದೆ.
940 ಜನರು ವಿವಿಧ ಆಸ್ರತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುವ ಸಂಖ್ಯೆ ಇಳಿಮುಖವಾಗುತ್ತಿದ್ದು, ಕೊರೊನಾಗೆ ಇಂದು ಓರ್ವ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು ನೋವಲ್ ಕೊರೊನಾಗೆ 38 ಜನರು ಬಲಿಯಾಗಿದ್ದಾರೆ.

LEAVE A REPLY

Please enter your comment!
Please enter your name here