ಕೊರೊನಾ ಸಂಕಷ್ಟ, ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಮಲ್ಲಿಕಾರ್ಜುನ ಖರ್ಗೆ ತೀರ್ಮಾನ

0
1458

ಕಲಬುರಗಿ, ಜುಲೈ. 15: ಕಳೆದ 5 ತಿಂಗಳಿAದ ದೇಶದಲ್ಲಿ ಕೊರೊನಾ ಸೋಂಕಿನಿAದ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರಾಣ ಕಳೆದುಕೊಂಡಿದ್ದು ಅಲ್ಲದೇ ದೇಶದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಈ ಬಾರಿಯ ನನ್ನ ಹುಟ್ಟು ಹಬ್ಬವನ್ನು ಆಚರಿಸದಿರಲು ತೀರ್ಮಾನಿಸಿರುವುದಾಗಿ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಗಳು, ಕಾಂಗೈನ ಹಿರಿಯ ಧುರೀಣರು ಹಾಗೂ ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಈ ಬಗ್ಗೆ ಅವರು ಪತ್ರಿಕಾಪ್ರಕಟಣೆಯೊಂದನ್ನು ಹೊರಡಿಸಿ, ಕೊರೊನಾ ರೋಗದ ಇಂತಹ ಸಂದರ್ಭದಲ್ಲಿ ನನ್ನ ಜನ್ಮ ದಿನ ಆಚರಿಸಲು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸಿ ರಾಜ್ಯದ ಹಲವಾರು ಜಿಲ್ಲೆಗಳಿಂದ ಆಗಮಿಸಿ, ನನ್ನನ್ನು ಭೇಟಿ ಮಾಡುವ ಮೂಲಕ ಶುಭ ಕೋರುತ್ತಿದ್ದ ನನ್ನ ಎಲ್ಲ ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸುವ ಮೂಲಕ ಇದೇ 21ರಂದು ನನ್ನ ಹುಟ್ಟು ಹಬ್ಬಕ್ಕೆ ತಾವಿದ್ದಲ್ಲಿಂದಲೇ ಶುಭ ಹಾರೈಸಿ, ಸದಾ ನಿಮ್ಮ ಅಭಿಮಾನ ಹಾರೈಕೆ ಸದಾ ಜೊತೆಯಿರಲಿ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here