ಕಲಬುರಗಿ ಲಾಕಡೌನ್ ಅವಧಿಯಲ್ಲಿನ ಮಾರ್ಗ ಸೂಚಿಗಳು

1
1669

ಕಲಬುರಗಿ, ಜುಲೈ. 13: ನಾಳೆ ದಿನಾಂಕ 14.07.2020 ರಿಂದ 20.07.2020ರ ವರಗೆ ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಘೋಷಿಸಿರುವ ಲಾಕ್‌ಡೌನ್ ಅವಧಿಯಲ್ಲಿನ ಮಾರ್ಗಸೂಚಿಗಳು ಈ ಕೆಳಗಿನಂತಿವೆ.
ಕಂಟೇನ್ಮೇAಟ್ ಝೋನ್‌ಗಳಲ್ಲಿ ಆಸ್ಪತ್ರೆ ಹಾಗೂ ಮೆಡಿಕಲ್ ಶಾಪೀ ಗಳು ಹೊರತು ಪಡಿಸಿ ಇತರೆ ಚಟುವಟಿಕೆ ನೀಷೇಧಿಸಿದೆ.
ಕಲಬುರಗಿ ನರ ಪ್ರದೇಶ ಹಾಗೂ ತಾಲೂಕುಗಳ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿನ ಎಲ್ಲಾ ಲಾಡ್ಜ್, ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ಹಾಗೂ ಧಾಬಾಗಳನ್ನು ಮುಚ್ಚತಕ್ಕದ್ದು.
ಕಲಬುರಗಿ ನಗರ ಪ್ರದೇಶ ಹಾಗೂ ತಾಲೂಕುಗಳ ನಗರ ಸ್ಥಳೀಯ ವ್ಯಾಪ್ತಿಯನ್ನು ಹೊರತುಪಡಿಸಿ ಎಂ.ಎಸ್.ಐ.ಎಲ್. (11ಸಿ) ವೈನ್ ಶಾಪ್ (ಸಿ.ಎಲ್. 2) ಮದ್ಯದ ಅಂಗಡಿ ತೆರೆಯಲು ಅನುಮತಿಸಿದೆ.
ಮಂದಿರ, ಮಸೀದಿ, ಗುರುದ್ವಾರ ಚರ್ಚಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಿದೆ. ಅಂಗಡಿಗಳಲ್ಲಿ ಪಾನ್, ಬೀಡಿ, ಗುಟಕಾ, ಸಿಗರೇಟಗಳ ಮಾರಾಟವನ್ನು ನಿಷೇಧಿಸಿದೆ.
ಜಿಲ್ಲೆಯ ನಗರ ಪ್ರದೇಶದಲ್ಲಿನ ಎಲ್ಲಾ ತರಹದ ಮಾದರಿ ವಾಹನ ಗಳಾದ ಅಟೋ ರೀಕ್ಷಾ, ಕಾರ್, ದ್ವಿಚಕ್ರ ವಾಹನಗಳ ಓಡಾಟ ನಿಷೇಧಿಸಿದೆ. ಇದರು ತುರ್ತು ಪರಿಸ್ಥಿತಿಗೆ ಅನ್ವಯಿಸುವುದಿಲ್ಲ.
ಸಾರ್ವಜನಿಕರ ಎಲ್ಲಾ ತರಹದ ವೈಯಕ್ತಿಕ ಹಾಗೂ ಧಾರ್ಮಿಕ ಕಾರ್ಯಗಳಾದ ಜಾತ್ರೆ, ಉರುಸ ಇತ್ಯಾದಿ, ಮದುವೆ, ಉಪನಯನ, ಗೃಹ ಪ್ರವೇಶ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಿಷೇಧಿಸಿದೆ.
ನಗರದಲ್ಲಿ ಕೇವಲ ರೈಲ್ವೆ ನಿಲ್ದಾಣದಿಂದ ರೈಲು ಆಗಮಿಸುವ ಸಮಯ ಕ್ಕನುಗುಣವಾಗಿ ಮಾತ್ರ ಸರ್ಕಾರಿ ಬಸ್‌ಗಳ ಸೌಲಭ್ಯವಿದ್ದು, ನಗರದಲ್ಲಿ ಇತರೆ ಎಲ್ಲಾ ಸರಕಾರಿ ಬಸ್‌ಗಳ ಸಂಚಾರವನ್ನು ನಿಷೇಧಿಸಿದೆ.
ಸರಕಾರ ಬಸ್‌ಗಳನ್ನು ಹೊರತುಪಡಿಸಿ ಇನ್ನಿತರ ಅಂತರ್ ತಾಲೂಕುಗಲ ಸಂಚಾರವನ್ನು ನಿಷೇಧಿಸಿದೆ.
ಜಿಲ್ಲೆಯ ಎಲ್ಲಾ ಪೆಟ್ರೋಲ್ ಬಂಕ್‌ಗಳು ಕೇವಲ ಬೆಳಿಗ್ಗೆ 8.00 ರಿಂದ ಅಪರಾಹ್ನ 2.00 ವರೆಗೆ ಕಾರ್ಯನಿರ್ವಹಿಸಿ ತದ ನಂತರ ಮುಚ್ಚುವುದು. ಅಗತ್ಯ ಮೂಲಭೂತ ಸೌಕರ್ಯಗಳಾದ ದಿನಸಿ ಅಂಗಡಿ ತರಕಾರಿ (ಸ್ಥಳೀಯ ಪ್ರದೇಶದಲ್ಲಿ ಮಾತ್ರ) ಹಾಲು, ಹಣ್ಣು, ವೈದ್ಯಕೀಯ ಮೆಡಿಕಲ್ ಗಳಿಗೆ ಯಾವುದೇ ನಿರ್ಭಂಧ ವಿಧಿಸಿಲ್ಲ.
ಕಡ್ಡಾಯವಾಗಿ ಎಲ್ಲಾ ಆಸ್ಪತ್ರೆಗಳು ಕಾರ್ಯನಿರ್ವಹಿಸತಕ್ಕದ್ದು. ಎಲ್ಲಾ ತರಹದ ಸರಕು ಸಾಗಾಣಿಗಳಿಗೆ ಪರವಾನಿಗೆ ರಹಿತವಾಗಿ ಸಂಚಾರಕ್ಕೆ ಅನುಮತಿಸಿದೆ.
ಹೊಟೆಲ್‌ಗಳಲ್ಲಿ ಕೇವಲ ಹೋಮ್ ಡೆಲೆವರಿಗೆ ಮಾತ್ರ ಅವಕಾಶ ಕಲ್ಪಸಿದೆ. ಹೀಗೆ ಇನ್ನು ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿ ಜಿಲ್ಲಾಧಿಕಾರಿಗಳು ಆದೇಶ ಹೋರಡಿಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here