ಬೆಂಗಳೂರು, ಜು. ೧೦: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸ್ವಂ ಆಗಿ ಹೋಂ ಕ್ವಾರಂಟೈನ್ ಆಗಿದ್ದಾರೆ.
ಸಿಎಂ ಕಚೇರಿಯ ಸಿಬ್ಬಂದಿಗೆ ಕೊರೊನಾ ಪರೀಕ್ಷ ನಡೆಸಿದಾಗ ಪಾಸೀಟಿವ್ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
ಯಾವುದೇ ಸರಕಾರದ ಕೆಲಸ ಕಾರ್ಯಗಳಿದ್ದರೆ ನೇರವಾಗಿ ಯಾರೂ ತಮ್ಮನ್ನು ಭೇಟಿ ಮಾಡಲು ಬರದಂತೆ ಅವರು ಅಧಿಕಾರಿಗಳಿಗೆ ಹಾಗೂ ತಮ್ಮ ಸಚಿವ ಸಹೋದ್ಯೋಗಿಗಳಿಗೆ ತಿಳಿಸಿದ್ದು, ಯಾವುದೇ ಕೆಲಸವಿದ್ದರೆ ವಿಡಿಯೋ ಕಾನ್ಫರೇನ್ಸ್ ಮೊರೆಗೆ ಅವರು ಹೋಗಲು ನಿರ್ಧರಿಸಿದ್ದಾರೆ.