ಪತ್ರಕರ್ತರಿಗೆ ವಂಚಿಸಿ ಹಣ ನುಂಗಿದ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ ಕಲಬುರಗಿಯ ಸತ್ರ ನ್ಯಾಯಾಧೀಶರು

0
1050

ಕಲಬುರಗಿ, ಜು. 7: ವಂಚನೆ ಮೋಸ ಮಾಡಿ ಹಣ ದುರುಪ ಯೋಗ ಪಡಿಸಿಕೊಂಡ ಆರೋ ಪದ ಮೇಲೆ ಜೆ.ಎಂ.ಎಫ್.ಸಿ. ನ್ಯಾ ಯಾಲಯವು ಆರೋಪಿಗಳಿಗೆ ಬಿಡುಗಡೆ ಮಾಡಿ ಅದೇಶಿಸಿತ್ತು. ಆದರೆ ಮತ್ತೆ ಈ ಪ್ರಕರಣ ಮೇಲಿನ ನ್ಯಾಯಾಲಯದಲ್ಲಿ ಅಂದರೆ 1ನೇ ಅಪರ ಸತ್ರ ನ್ಯಾಯಾಲಯ ಈ ಆರೋಪಿಗಳಿಗೆ ಶಿಕ್ಷೆ ನೀಡಿ ಮಹತ್ವದ ಆದೇಶ ಹೊರಡಿಸಿದೆ.
ಸಿದ್ದಪ್ಪ ತಂದೆ ಶರಣಪ್ರಪ ದಿನ ಪತ್ರಿಕೆಯ ವರದಿಗಾರ ಇತನು ಹಿಂದುಳಿದ ವರ್ಗಗಳ ಆಯೋಗ ದಿಂದ ಸಾಲ ಪಡೆಯಲು ಅರ್ಜಿ ಪಡೆದು ಆತನಿಗೆ 17800 ರೂ. ಪಂಗನಾಮ ಹಾಕಿದ ಆರೋಪಿ ಗಳಾದ ಲೋಕೇಶ, ಬಿ. ಅಮರ ನಾಥ, ಚಂದ್ರಕಾAತ, ಮಲ್ಲಿಕಾ ರ್ಜುನ ಮತ್ತು ಶಶಿಕಾಂತ ಇವರೆ ಲ್ಲರೂ ಕೂಡಿ ಅರ್ಜಿ ಪಡೆದು ಬ್ಯಾಂಕಿನಲ್ಲಿ ಸಿದ್ದಪ್ಪ ಶರಣಪ್ಪ ಹೆಸ ರಇನಲ್ಲಿ ಖಾತೆ ತೆಗೆದು ಅದರಲ್ಲಿ 2400 ರೂ. ಜಮಾ ಮಾಡಿ, ಉಳಿದ ಹಣವನ್ನು ನಕಲಿ ಖಾತೆ ಯನ್ನು ಆರೋಪಿತರು ತೆಗೆದು ಆ ಹಣವನ್ನು ತಮ್ಮ ಸ್ವಂತ ಉಪ ಯೋಗಕ್ಕೆ ಬಳಸಿಕೊಂಡಿದ್ದು ಫಿರ್ಯಾದಿಗೆ ಮತ್ತು ಸರಕಾರಕ್ಕೆ ಮೋಸ ಮತ್ತು ವಂಚನೆ ಮಾಡಿರು ವುದು ತನಿಖೆಯಿಂದ ಸಾಬೀತು ಪಟ್ಟತ್ತು. ಆರೋಪಿತರ ವಿರುದ್ದ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೋಷಾರೋಪಣ ಪಟ್ಟಿ ದಾಖಲಿ ಸಾಲಿತ್ತು.
ಪ್ರಕರಣ ವಿಚಾರಣೆಗಾಗಿ ಜೆ. ಎಂ.ಎಫ್.ಸಿ. ನ್ಯಾಯಾಲಯ, ಕಲಬುರಗಿ ಮುಂದೆ ಬಂದಿದ್ದು, ಸಾಕ್ಷಿ ವಿಚಾರಣೆ ಮಾಡಿ ದಿನಾಂಕ 17.2.2015ರಂದು ಆರೋಪಿತರ ವಿರುದ್ಧ ಸಾಕ್ಷಾಧಾರಗಳಿಲ್ಲವೆಂದು ಆರೋಪಿತರನ್ನು ಬಿಡುಗಡೆ ಮಾಡ ಲಾಗಿತ್ತು.
ಈ ತೀರ್ಪಿನ ವಿರುದ್ಧ ಸರ ಕಾರವು ಮೇಲ್ಮನವಿಯನ್ನು ಸಲ್ಲಿ ಸಲು ಈ ಹಿಂದಿನ ಅಭಿಯೋಜ ಕರಿಗೆ ಆದೇಶಿಸಿದ ಹಿನ್ನಲೆಯಲ್ಲಿ ಸಲ್ಲಿಸಿದ ಮೇಲ್ಮನವಿಯನ್ನು ವಿಚಾ ರಣೆಗೆ ಕೈಗೆತ್ತಿಕೊಂಡ 1ನೇ ಸತ್ರ ನ್ಯಾಯಾಲಯದ ಸತ್ರ ನ್ಯಾಯಾ ಧೀಶರಾದ ಸುಕಲಾಕ್ಷ ಪಾಲನ್ ಅವರು ಪ್ರಕರಣದ ದಾಖಲಾತಿ ಗಳನ್ನು ಸಾಕ್ಷಾಧಾರಗಳನ್ನು ಪರಾ ಮರ್ಶಿಸಿ, ಎರಡು ಪಕ್ಷದವರ ವಾರ ಆಲಿಸಿದನಂತರ ಆರೋಪಿ ಗಳು ತಪ್ಪಿತಸ್ಥರು ಎಂದು ತಿರ್ಮಾ ನಿಸಿ ಆರೋಪಿ 2 ಮತ್ತು 5 ಇವ ರಿಗೆ ಕಲಂ 467, 468, 419, 420 ಐಪಿಸಿ ಅಡಿಯಲ್ಲಿ ಅಪರಾ ಧಕ್ಕಾಗಿ ಆರೋಪಿತರಿಗೆ ವಿವಿಧ ಕಲಂಗಳ ಅಡಿಯಲ್ಲಿ 3 ವರ್ಷಗಳ ಕಾಲ ಶಿಕ್ಷೆ ಮತ್ತು ರೂ. 20000 ದಂಡವನ್ನು ವಿಧಿಸಿರುತ್ತಾರೆ. ಆರೋಪಿ ನಂ. 1 ಮೃತಪಟ್ಟಿರು ತ್ತಾನೆ.
ಸರಕಾರದ ಪರವಾಗಿ ಎಸ್. ಆರ್. ನರಸಿಂಹಲು ಸರ್ಕಾರಿ ಅಭಿ ಯೋಜಕರು ಕಲಬುರಗಿ ಇವರು ವಾದವನ್ನು ಮಂಡಿಸಿದ್ದರು.

LEAVE A REPLY

Please enter your comment!
Please enter your name here