ಜುಲೈ ೧೦ರಿಂದ ಆರೋಗ್ಯ ಸೇವೆ ಸ್ಥಗೀತ

0
828

ಬೆಂಗಳೂರು, ಜು. ೫: ಕೋವಿಡ್ ೧೯ ವಿರುದ್ಧದ ಹೋರಾಟಕ್ಕೆ ಅಗತ್ಯವಿರುವಷ್ಟು ರಕ್ಷಣಾ ಸಾಮಾಗ್ರಿ ನೀಡಬೇಕು. ಅಲ್ಲದೇ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ೧೨ ಸಾವರಿ ರೂ. ಗೌರವಧನ ನೀಡುವ ಬಗ್ಗೆ ಖಾತರಿಪಡಿಸಬೇಕೆಂದು ಆಗ್ರಹಿಸಿ ಜುಲೈ ೧೦ ರಿಂದ ರಾಜ್ಯಾದ್ಯಂತ ಅನಿರ್ಧಿಷ್ಟ ಆರೋಗ್ಯ ಸೇವೆ ಸ್ಥಗೀತಗೊಳಿಸಿ ಆಶಾ ಕಾರ್ಯಕರ್ತೆಯರು ತೀವ್ರ ಹೋರಾಟ ನಡೆಸಲಿದ್ದಾರೆ.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷರಾದ ವಿ. ಜಿ. ದೇಸಾಯಿ ಅವರು ಈ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.
ಕಳೆದ ಜೂನ್ ೩೦ರಂದು ಮತ್ತು ಕಳೆದ ಒಂದು ವಾರದಿಂದ ಜಿಲ್ಲಾ, ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ, ತಹಸೀಲ್ದಾರರಿಗೆ, ಶಾಸಕರಿಗೆ, ಸಚಿವರುಗಳಿಗೆ ಖುದ್ದಾಗಿ ಅವರವರ ಕ್ಷೇತ್ರಗಳಿಗೆ ಹೋಗಿ ಮನವಿ ಸಲ್ಲಿಸಿದ್ದೂ ಏನು ಪ್ರಯೋಜವಾಗಿಲ್ಲ. ಅಲ್ಲದೇ ಸರಕಾರಕ್ಕೆ ಕಳೆದ ಜನೆವರಿಯಲ್ಲಿ ಹತ್ತಾರು ಮನವಿ ಪತ್ರ ಸಲ್ಲಿಸಿ ಆಶಾ ಕಾರ್ಯಕರ್ತೆಯರ ಬೇಡಿಕೆ ಬಗ್ಗೆ ತಿಳಿಸಲಾಗಿತ್ತು, ಆದರೆ ಮನವಿಗೆ ಯಾವುದೇ ಪ್ರತಿಕ್ರಿಯೇ ಸಿಗದ ಹಿನ್ನೆಲೆಯಲ್ಲಿ ಈ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎ.ಐ.ಯು.ಟಿ.ಯು. ಜಿಲ್ಲಾ ಕಾರ್ಯದರ್ಶಿ ಎಸ್. ಎಂ. ಶಮಾ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಶ್ರೀಮತಿ ಶೀವಲಿಂಗಮ್ಮ, ರಾಧಾ, ಜಯಶ್ರೀ ಅವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here