ಕಲ್ಯಾಣ ಕರ್ನಾಟಕದ ಬ್ಯಾಕಲಾಗ್, ನೇರ ನೇಮಕಾತಿಗೆ ಸರಕಾರದ ತಿಲಾಂಜಲಿ

0
973

ಕಲಬುರಗಿ, ಜು. 6: ಕಲ್ಯಾಣ ಕರ್ನಾಟಕದ ವೃಂದದ ಮತ್ತು ಬ್ಯಾಕಲಾಗ್ ಹುದ್ದೆಗಳು ಸೇರಿದಂತೆ ನೇರ ನೇಮಕಾತಿಯನ್ನು ರಾಜ್ಯ ಸರಕಾರ ಮುಂದಿನ ಆದೇಶ ಬರುವ ವರೆಗೆ ತಡೆ ಹಿಡಿದಿದೆ.
ಆರ್ಥಿಕ ಇಲಾಖೆ ಹೊರಡಸಿದಿದ ಈ ಸುತ್ತೋಲೆಗೆ ಮುಖ್ಯಮಂತ್ರಿಗಳು ಸಹ ಅನುಮೋದನೆ ನೀಡಿರುವುದು ದುರಾ ದೃಷ್ಟವಾಗಿದೆ.
ರಾಜ್ಯದಲ್ಲಿ ಎಲ್ಲಡೆ ಸರಕಾರದ ಯಾವುದೇ ಹುದ್ದೆಗಳಿಗೆ ಅಥವಾ ಅದರಡಿ ಬರುವ ಕೋಟಾಗಳಲ್ಲಿ ನೇರ ನೇಮಕಾತಿ ಮತ್ತು ಬ್ಯಾಕ್‌ಲಾಗ್ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ತಡೆಹಿಡಿಯಲು ಸರಕಾರ ಅದೇಶಿಸದೆ, ಕೇವಲ ಕಲ್ಯಾಣ ಕರ್ನಾಟಕಕ್ಕೆ ಮಾತ್ರ ಈ ಆದೇಶ ಹೊರಡಿಸಿದ್ದು ಎಷ್ಟು ಸಮಂಜಷವಾಗಿದೆ.
ಇಲ್ಲಿ ನೇಮಕಾತಿಗಳು ನಡೆದರೆ ಸರಕಾರದ ಬೊಕ್ಕಸಕ್ಕೆ ಹೊರೆಯಾ ಗುತ್ತವೆಯೇ? ಈ ಭಾಗ ಬಿಟ್ಟು ರಾಜ್ಯದ ಇತರೆಡೆ ನೇಮಕಾತಿಯಾದರೆ ಬೊಕ್ಕಸಕ್ಕೆ ಹಾನಿ ಭರಿಸುವ ಶಕ್ತಿ ಬರುವುದೇ ಹೀಗೇಗೆ ಸರಕಾರ ನಿರ್ಧಾರ ಕೈಗೊಂಡಿದೆ ಎಂಬುದು ತಿಳಿಯದಾಗಿದೆ. ಅಲ್ಲದೇ ಇದು ಮಲತಾಯಿ ಧೋರಣೆ ಎಂದರೂ ಕೂಡಾ ಅತಿಶಯೋಕ್ತಿ ಆಗಲಾರದು.

LEAVE A REPLY

Please enter your comment!
Please enter your name here