ಕಲಬುರಗಿಯಲ್ಲಿ ಇಂದು 53 ಕೊರೊನಾ ಪಾಸಿಟಿವ್ ಪ್ರಕರಣಗಳು

0
806

ಕಲಬುರಗಿ, ಜು. 6: ಸಂಡೇ ಲಾಕ್‌ಡೌನ್… ಮಂಡೆ ಟೂ ಶನಿವಾರ ರಾತ್ರಿ 8 ರಿಂದ ಬೆಳಿಗ್ಗೆ 5ರ ವರೆಗೆ ರಾತ್ರಿ ಕರ್ಫ್ಯೂ. ಎಲ್ಲ ಪ್ರಯೋಗ ಮಾಡಿದರೂ ಕೂಡಾ ಕೊರೊನಾ ಎಂಬ ಮಹಾಮಾರಿ ತನ್ನ ಅಖಂಡ ಬಾಹುಗಳಿಂದ ಜನರನ್ನು ಕಾಡುವುದು ಬಿಡುತ್ತಿಲ್ಲ. ಸೋಮವಾರ ಕೋವಿಡ್ 19 ಪ್ರಕರಣಗಳು ಕಲಬುರಗಿ 53 ಜನರಿಗೆ ಪಾಸಿಟಿವ್ ಬಂದ ಬಗ್ಗೆ ಆರೋಗ್ಯ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‌ನಲ್ಲಿ ಪ್ರಕಟಿಸಿದೆ.
ನಿನ್ನೆವರೆಗಿದ್ದ ಪ್ರಕರಣಗಳು ಇಂದು ಸೇರಿ ಒಟ್ಟು ಜಿಲ್ಲೆಯಲ್ಲಿ 1699 ವರದಿಯಾಗಿವೆ.
ಸಮಾಧಾನದ ವರದಿ ಅಂದರೆ ಕೊರೊನಾಗೆ ಇಂದು ಯಾವುದೇ ಬಲಿ ಕಲಬುರಗಿಯಲ್ಲಿ ನಡೆಯ ದಿರುವುದು.
ಸೋಂಕಿನಿAದ ಗುಣಮು ಖರಾಗಿ ಇಂದು 69 ಜನರು ಆಸ್ಪತ್ರೆ ಯಿಂದ ಬಿಡುಗಡೆ ಹೊಂದಿ ದ್ದಾರೆ. ಇಲ್ಲಿಯವರೆಗೆ ಬಿಡುಗಡೆ ಯಾದವರ ಸಂಖ್ಯೆ 1310.
ಒಟ್ಟು ಪ್ರಕರಣಗಳಲ್ಲಿ 362 ಸಕ್ರೀಯ ಪ್ರಕರಣಗಳಿದ್ದು, ಜಿಲ್ಲೆ ಯಲ್ಲಿ 27 ಜನ ಈ ರೋಗಕ್ಕೆ ಬಲಿಯಾಗಿದ್ದಾರೆ.

LEAVE A REPLY

Please enter your comment!
Please enter your name here