ಹತ್ತನೆ ಮತ್ತು ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷಗೆ ಈ.ಕ.ರ.ಸಾ.ಸಂಸ್ಥೆಯಿAದ ಉಚಿತ ಬಸ್ ಸೇವೆ

0
835

ಕಲಬುರಗಿ, ಜೂ. ೧೩: ಈ ಹಿಂದೆ ನಿಗದಿಯಾಗಿದ್ದ ಎಸ್.ಎಸ್.ಎಲ್.ಸಿ. ಮತ್ತು ದ್ವೀತಿಯ ಪಿಯು ಪರೀಕ್ಷೆಗಳು ಮುಂದೂಡಿ ಈಗ ಜೂನ್ ೨೫ ರಿಂದ ಜುಲೈ ೭ರ ವರೆಗೆ ನಡೆಸಲು ಸರಕಾರ ತೀರ್ಮಾನಿಸಿದೆ.
ನೂತನ ವೇಳಾ ಪಟ್ಟಯಂತೆ ನಡೆಯುವ ಪರೀಕ್ಷೆಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಮಾಡಿದೆ.
ಸರಕಾರದ ಆದೇಶದಂತೆ ನಡೆಯುವ ಈ ಪರೀಕ್ಷೆಗಳಿಗೆ ಆಯಾ ಶಿಕ್ಷಣ ಸಂಸ್ಥೆಗಳ ಖಾಸಗಿ ಬಸ್‌ಗಳ ಹೊರತಾಗಿಯೂ ನಗರ ಹಾಗೂ ಗ್ರಾಮೀಣ ಭಾಗದ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಇದರ ಲಾಭಪಡೆಯಲಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾಸಂಸ್ಥೆಯ ಹೊರತಾಗಿ ಇತರೆ ವಿದ್ಯಾಸಂಸ್ಥೆಗಳಿಗೆ ಪರೀಕ್ಷಾ ಕೇಂದ್ರಗಳ ನಿಯೋಜನೆಯಾಗಿರುವುರಿಂದ ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಿದೆ.
ದಿನಾಂಕ ೨೫.೬.೨೦೨೦ ರಿಂದ ೪.೭.೨೦೨೦ ವರೆಗೆ ಪರೀಕ್ಷೆಗೆ ಹಾಜರಾಗುವ ಎಲ್ಲಾ ಎಸ್ ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ವಾಸ ಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಮತ್ತು ಹಿಂದಿರುಗುವಾಗ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತಂತೆ ಎಲ್ಲ ವಿಭಾಗಗಳಿಗೆ ಮತ್ತು ಘಟಕ ವ್ಯವಸ್ಥಾಪಕರಿಗೆ ಸೂಚನೆಯನ್ನು ನೀಡಲಾಗಿದೆ.
ಅದರಂತೆ ದಿನಾಂಕ ೧೮.೬.೨೦೨೦ ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಪರೀಕ್ಷೆ ಇದ್ದು ಸದರಿ ದಿನದಂದು ಸಹ ಪ್ರವೇಶ ಪತ್ರದೊಂದಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಈ ಸೇವೆಯನ್ನು ಸದುಪಯೋಗ ಪಡೆದು ಕೊಳ್ಳುವುದು, ಈ ಕುರಿತಂತೆ ಏನಾದರು ಅನಾ ನುಕೂಲತೆಯಾದಲ್ಲಿ, ಈ ಕೆಳಕಾಣಿಸಿದ ಸಂಬA ಧಪಟ್ಟ ವಿಭಾಗಗಳ ಸಂಚಾರ ಅಧಿಕಾರಿಗಳನ್ನು ಸಂಪರ್ಕಿಸುವುದು.
ಕಲಬುರಗಿ ವಿಭಾಗ-೧ -೭೭೬೦೯೯೨೧೦೨
ಕಲಬುರಗಿ ವಿಭಾಗ-೨ -೭೭೬೦೯೮೪೦೮೬
ಬೀದರ ವಿಭಾಗ : ೭೭೬೦೯೯೨೨೦೨
ಯಾದಗೀರ ವಿಭಾಗ ೭೭೬೦೯೯೨೪೫೨
ರಾಯಚೂರು ವಿಭಾಗ ೭೭೬೦೯೯೨೩೫೨
ಬಳ್ಳಾರಿ ವಿಭಾಗ : ೭೭೬೦೯೯೨೧೫೨
ಕೊಪ್ಪಳ ವಿಭಾಗ : ೭೭೬೦೯೯೨೪೦೨
ಹೊಸಪೇಟೆ ವಿಭಾಗ : ೭೭೬೦೯೯೨೩೦೨
ವಿಜಯಪುರ ವಿಭಾಗ :೭೭೬೦೯೯೨೨೫೨

LEAVE A REPLY

Please enter your comment!
Please enter your name here