ಕಲಬುರಗಿ, ಜೂ. ೬: ಕೋವಿಡ್ ೧೯ ಸಂದರ್ಭದಲ್ಲಿ ಜನಪರ ಕೆಲಸಗಳಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರತಿಯೊಂದು ಮನೆ ಮನೆಗೆ ಹೋಗಿ ಆಹಾರಧಾನ್ಯವನ್ನು ವಿತರಿಸಿದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ಅವರ ಘನತೆೆಗೆ ಧಕ್ಕೆ ತರುವ ಪ್ರಯತ್ನಮಾಡಿದ ಬಿಸಿಎಂ ಅಧಿಕಾರಿ ರಮೇಶ ಸಂಗಾ ಅವರನ್ನು ಈ ಕೂಡಲೇ ವರ್ಗಾವಣೆ ಮಾಡಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ಜನತಾ ಪಕ್ಷದ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಅವಿನಾಶ ಬಾಬುಷಾ ಗಾಯಕವಾಡ ಅವರು ಒತ್ತಾಯಿಸಿ ದ್ದಾರೆ.
ಮಾರಕ ರೋಗ ಹರಡುತ್ತಿರುವ ಸಮಯದಲ್ಲಿ ಅಧಿಕಾರಿಯಾಗಿ ಉತ್ತಮ ಕಾರ್ಯನಿರ್ವಹಿಸದೇ ಈ ತರಹದ ರಾಜಕೀಯ ಲೇಪಿತ ಹೇಳಿಕೆ ನೀಡಿ, ಶಾಸಕರ ತೇಜೋವಧೆಗೆ ಪ್ರಯತ್ನಿಸಿದ್ದು ಖಂಡನಾರ್ಹವಾಗಿದೆ ಎಂದು ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.