ಬೆಂಗಳೂರು, ಜೂನ್. ೩: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ೪೦೬೩ ಸಾವಿರ ಗಡಿ ದಾಟ್ಟಿದ್ದು, ಮಹಾರಾಷ್ಟç ಹಾಗೂ ನೆರೆಯ ರಾಜ್ಯಗಳಿಂದ ಆಗಮಿಸಿದ ವಲಸೆ ಕಾರ್ಮಿಕರಿಂದಲೇ ಈ ಸಂಖ್ಯೆ ಹೆಚ್ಚಾಗತೊಡಗಿದೆ.
ಕ್ವಾರಂಟೈನ್ ಕೇಂದ್ರಗಳಲ್ಲಿ ಇಟ್ಟಿರುವ ವಲಸಿಗರಿಂದ ನೂರಕ್ಕೆ ೯೦ರಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದು ರಾಜ್ಯಕ್ಕೆ ಮಾರಕವಾಗಿ ಪರಿಣಮಿಸಿದೆ.
ಈ ಮೊದಲು ನಂ. ಸ್ಥಾನದಲ್ಲಿದ್ದ ಕರ್ನಾಟಕ ನಂತರ ದಿನಗಳಲ್ಲಿ ನಂ. ೧೨ಕ್ಕೆ ಜಿಗಿಯಿತು ಈಗ ಮತ್ತೆ ೯ರ ಸ್ಥಾನಕ್ಕೆ ಜಿಗಿಯುವ ಸಾಧ್ಯತೆ ಹೆಚ್ಚಾಗತೊಡಗಿದೆ.
ಇಂದು ದಾಖಲಾದ ಪ್ರಕರಣಗಳಲ್ಲಿ ಕಲಬುರಗಿ ಜಿಲ್ಲೆ ಅತಿ ಹೆಚ್ಚಿನ ೧೦೫ ಪ್ರಕರಣಗಳನ್ನು ಹೊಂದಿದ್ದು ನಂತರದ ಸ್ಥಾನ ಉಡುಪಿ ೬೨ ಮತ್ತು ರಾಯಚೂರು ೩೫ ಕರೊನಾ ಪ್ರಕರಣಗಳ ದಾಖಲಾಗಿವೆ.
ರಾಜ್ಯದಲ್ಲಿ ಈವರೆಗೆ ೫೩ ಜನರು ಸಾವಿಗೀಡಾಗಿದ್ದು, ೧೫೧೪ ಜನರು ಈ ರೋಗದಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ೨೪೯೪ ಸಕ್ರೀಯ ಪ್ರಕರಣಗಳಿವೆ.
Nice news coverage. Keep it up.
Thank you