ನೆನೆಗುದಿಗೆ ಬಿದ್ದಿರುವ ಗ್ರಾಮ ಪಂಚಾಯತ್ ನೌಕರರ ಬೇಡಿಕೆ ಈಡೆರಿಕೆಗಾಗಿ ಆಗ್ರಹಿಸಿ ಸಿಯುಟಿಯು ನಿಂದ ಪ್ರತಿಭಟನೆ

0
926

ಕಲಬುರಗಿ, ಜೂ. 2: ಸರಕಾರ ಆದೇಶ ಹೋರಡಿಸಿ ತಿಂಗಳುಗಳೂ ಕಳೆದರೂ ಸರಕಾರದ ಆದೇಶ ಗ್ರಾಮ ಪಂಚಾಯತಿಗಳಲ್ಲಿ ಜಾರಿಯಾಗುತ್ತಿಲ್ಲ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಗ್ರಾಮ ಪಂಚಾಯತ ನೌಕರರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ (ಸಿಐಟಿಯು) ಕಲಬು ರಗಿ ಜಿಲ್ಲಾ ಸಮಿತಿಯು ಇಂದು ಜಿಲ್ಲಾ ಪಂಚಾಯತ್ ಆವರಣದಲ್ಲಿ ಪ್ರತಿಭಟನೆ ನಡೆಸಿತು.
ಇಎಫ್‌ಎಂಎಸ್ ಗೆ ಸೇರ್ಪಡೆ ಮಾಡುವುದು, ನಿವೃತ್ತಿಹೊಂದಿದವರಿಗೆ ಉಪಧನ ತೆರಿಗೆ ಸಂಗ್ರಹದಲ್ಲಿ ಶೇ. ೪೦% ನೀಡುವುದು ಹೀಗೆ ೧೦ ಹಲವಾರು ಬೇಡಿಕೆ ಗಳಿಗೆ ಸ್ಪಂದಿಸಿ ಸರಕಾರ ಆದೇಶ ಹೊರ ಡಿಸಿ ತಿಂಗಳುಗಳು ಕಳೆದರೂ ಇನ್ನು ವರೆಗೆ ಜಾರಿಗೆ ಮಾಡದಿ ರುವುದನ್ನು ಖಂಡಿಸಿ ಈ ಪ್ರತಿಭಟನೆ ನಡೆಯಿತು.
ಈ ಪ್ರತಿಭಟನೆಯಲ್ಲಿ ಸಮಿತಿಯ ರಾ ಜ್ಯಾಧ್ಯಕ್ಷರಾದ ಮಾರುತಿ ಮಾನಪಡೆ, ಜಿಲ್ಲಾಧ್ಯಕ್ಷರಾದ ಬಸವರಾಜ ಪಾಟೀಲ ಹರಸೂರ, ಪ್ರಧಾನ ಕಾರ್ಯರ್ಶಿ ಉಮ ಶಂಕರ ಕಡಣಿ, ಖಜಾಂಚಿ ಶಿವಾನಂದ ಕವಲಗಾ (ಬಿ) ಸಿದ್ದಣ್ಣಗೌಡ ಕೂಡಿ, ಶಾಂತಯ್ಯಸ್ವಾAಇ, ರಾಝು, ಜೈಭೀಮ, ಮಹಾದೇವ, ಭೀಮರಾಯ, ಬಂದ ಗಿಸಾಬ ಮುಂತಾದವರು ಪಾಲ್ಗೊಂ ಡಿದ್ದರು.

LEAVE A REPLY

Please enter your comment!
Please enter your name here