ಕೇಂದ್ರದ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ ಜಾರಿಗೆ ಸಿ.ಪಿ.ಐ. ಎಂ. ಖಂಡನೆ

0
745

ಕಲಬುರಗಿ, ಜೂ. ೨: ಭಾರತ ಸರಕಾರ ಸಾರ್ವಜನಿಕ ವಿದ್ಯುತ್ ರಂಗವನ್ನು ಇಡಿ ಯಾಗಿ ಖಾಸಗೀಕರಣಿಸಲು ವಿದ್ಯುಚ್ಚಕ್ತಿ ಮಸೂದೆ ೨೦೨೦ ದೇಶದಾದ್ಯಂತ ಜಾರಿ ಗೆ ತರಲು ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರುತ್ತಿರುವುದು ಭಾರತ ಕಮ್ಯು ನಿಸ್ಟ್ ಪಕ್ಷ (ಮಾರ್ಕ್ಸವಾದಿ) ಜಿಲ್ಲಾ ಸಮಿತಿಯು ಖಂಡಿಸಿದೆ.
ಇಂದು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜೇಸ್ಕಾಂನ ವ್ಯವಸ್ಥಾಪಕ ನಿರ್ದೇಶಕರ ಮುಖಾಂತರ ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿ ಮೇಲಿನಂತೆ ಖಂಡಿಸಿದ್ದಾರೆ.
ವಿದ್ಯುತ್ ಎಂಬುದು ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಮಹತ್ವದ ಒಂದು ಸೇವೆಯೆಂಬ ಇದುವರೆಗಿನ ನಿಲುಮೆ ಯಿಂದ ದೂರಸರಿದು ಅದನ್ನು ಮಾರು ಕಟ್ಟೆ ಪ್ರೇರಿತ ಲಾಭದ ಸರಕನ್ನಾಗಿ ಪರಿ ವರ್ತಿಸುವ ಕೇಂದ್ರದ ಕ್ರಮ ಖಂಡನೀಯ ವಾಗಿದೆ ಎಂದು ಹೇಳಿದೆ.
ಈ ಮಸೂದೆ ರಾಜ್ಯದಲ್ಲಿ ಜಾರಿಗೊಳಿ ಸಿದ್ದಲ್ಲಿ ರಾಜ್ಯದ ವಿದ್ಯುತ್ ಉತ್ಪಾದನಾ ಸರಬರಾಜು ಹಾಗೂ ವಿತರಣೆ ಕಂಪನಿ ಗಳು ಹಾಗೂ ಅವುಗಳ ಲಕ್ಷಾಂತರ ಕೋಟಿ ಆಸ್ತಿಗಳು, ಕಾರ್ಪೋರೇಟ್ ಕಂ ಪನಿಗಳ ಕೈವಶವಾಗಲಿದೆ ಅಲ್ಲದೇ ರಾಜ್ಯ ಸರಕಾರದ ಹಾಲಿ ವಿದ್ಯುತ್ ನೀತಿಯಿಂದ ಮಿಲಿಯಾಂತರ ಕೃಷಿ ಪಂಪ್ಸಟ್‌ಗಳು, ಕುಟುಂಬಗಳು ಹಾಗೂ ಭಾಗ್ಯ ಹಾಗೂ ಕುಟೀರ ಜ್ಯೋತಿ ಯೋಜನೆಗಳಿಂದ ಕೋಟ್ಯಾಂತರ ಬಡ ಕುಟುಂಬಗಳು ಹಾಗೂ ಸಣ್ಣ ಕೈಗಾರಿಕೆಗಳ ಕುಟುಂಬ ಗಳು ಉಚಿತ ಹಾಗೂ ಸಹಾಯಧನ ಪ್ರಯೋಜನ ಪಡೆಯುತ್ತಿವೆ. ಇವರೆಲ್ಲರೂ ಅಂತಹ ಪ್ರಯೋಜನವನ್ನು ಕಳೆದುಕೊ ಳ್ಳುವ ಮಾತ್ರವಲ್ಲದೇ ಇವರಲ್ಲಿ ಬಹುತೇ ಕರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತ ದೆ ಖಾಸಗಿ ಕಂಪನಿಗಳ ವ್ಯವಹಾರವು ರಾಜ್ಯದ ಎಲ್ಲ ಗ್ರಾಹಕರ ಭಾರಿ ಲೂಟಿಗೆ ಗೆ ಕಾರಣವಾಗಲಿವೆ. ಈ ಜನ ವಿರೋಧಿ ಮಸೂದೆಯನ್ನು ಜಾರಿಗೊಳಿಸಬಾರದು ಎಂದು ಭಾರತ ಕಮ್ಯನಿಸ್ಟ್ ಪಕ್ಷವು ಒತ್ತಾಯಿಸಿದೆ.
ರಾಜ್ಯ ಸರಕಾರ ಕೇಂದ್ರ ಸರಕಾರದ ಜನವಿರೋಧಿ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ ೨೦೨೦ ವಾಪಸ್ ಪಡೆಯು ವಂತೆ ಒತ್ತಾಯಿಸಿ ಪತ್ರ ಬರೆಯಲು ಈ ಕುರಿತು ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಸಿಪಿಐ ಎಂ. ಮುಖ್ಯಮಂ ತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದೆ.
ಸಿಪಿಐ ಎಂನ ಮೇಘರಾಜ ಕಠಾರೆ, ಅಲ್ತಫ್ ಹುಸೈನ್ ಇನಾಮದಾರ, ಜಾವೇದ್ ಹುಸೇನ್ ಮುಗಳಿಕರ್, ಭೀಮಶೆಟ್ಟಿ ಯಂಪಳ್ಳಿ, ಗುನಂದೇಶ ಕೋಣಿನ ಮತ್ತು ಶರಣಬಸಪ್ಪ ಮಮಶೆಟ್ಟಿ ಅವರುಗಳು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

LEAVE A REPLY

Please enter your comment!
Please enter your name here