ಕೊರೋನಾ ಸೋಂಕಿನಿoದ 10 ಜನ ಗುಣಮುಖ

0
842

ಕಲಬುರಗಿ.ಮೇ.29(ಕ.ವಾ): ಶುಕ್ರವಾರ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 10 ಜನ ರೋಗಿಗಳು ಕೊರೋನಾ ಸೋಂಕಿನಿoದ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.
ಅಫಜಲಪೂರ ಪಟ್ಟಣದ 35 ವರ್ಷದ ಯುವಕ (P-805), ಕಮಲಾಪೂರಿನ 30 ವರ್ಷದ ಯುವಕ (P-806) ಹಾಗೂ ಯಡ್ರಾಮಿಯ 19 ವರ್ಷದ ಯುವಕ (P-954) ಗುಣಮುಖರಾಗಿದ್ದಾರೆ.
ಆಳಂದ ತಾಲೂಕಿನ ಮುದ್ದಡಗಾ ಗ್ರಾಮದ 42 ವರ್ಷದ ಪುರುಷ (P-952), 28 ವರ್ಷದ ಯುವತಿ (P-955), 15 ವರ್ಷದ ಬಾಲಕಿ (P-956) ಹಾಗೂ 35 ವರ್ಷದ ಮಹಿಳೆ (P-957) ಸೋಂಕಿನಿAದ ವಾಸಿಗೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಕಲಬುರಗಿ ನಗರದ ಮೋಮಿನಪುರ ಪ್ರದೇಶದ 14 ವರ್ಷದ ಬಾಲಕ (P-866), ಗಾಜಿಪುರ ಪ್ರದೇಶದ 28 ವರ್ಷದ ಯುವಕ (P-984) ಹಾಗೂ ಹಳೇ ಭೋವಿಗಲ್ಲಿ ಪ್ರದೇಶದ 30 ವರ್ಷದ ಯುವತಿ (P-1038) ಸಹ ಕೊರೋನಾ ವಿರುದ್ಧ ಹೋರಾಡಿ ಮಹಾಮಾರಿ ಸೋಂಕಿನಿoದ ಹೊರಬಂದಿದ್ದಾರೆ. ಇದರಿಂದ ಕೊರೋನಾ ಪೀಡಿತ 251 ಜನರಲ್ಲಿ 85 ಜನ ಗುಣಮುಖರಾಗಿದ್ದಾರೆ ಎಂದು ಡಿ.ಸಿ. ಶರತ್ ಬಿ. ವಿವರಿಸಿದರು.

Total Page Visits: 960 - Today Page Visits: 1

LEAVE A REPLY

Please enter your comment!
Please enter your name here