ಕಲಬುರಗಿ, ಡಿ. 01; ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಕುರಿತು ಒಳಗೊಳಗೆ ಬುದಿಮುಚ್ಚಿದ ಕೆಂಡದAತಿರುವ ಪರಿಸ್ಥಿತಿಯ ಬಗ್ಗೆ ಸ್ಪಷ್ಡಪಡಿಸಿದ ಡಿಕೆಶಿ ನನ್ನ ಮತ್ತು ಸಿದ್ಧರಾಮಯ್ಯ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.
ಅವರು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡುತ್ತ, ನೀವು ಮಾಧ್ಯಮದವರು ಮಾತ್ರ ನನ್ನ ಮತ್ತು ಸಿದ್ರಾಮಯ್ಯನವರ ನಡುವೆ ಯಾವ ಬಿರುಕಿದೆ ಎಂದು ಬಿಜೆಪಯವರೇ ಅನ್ನುತ್ತಿದ್ದಾರೆ ಹಾಗೆ ನೋಡಿದರೆ ಬಿಜೆಪಯಲ್ಲಿಯೇ ಬಿರುಕಿದೆ ಎಂಬ ಬಗ್ಗೆ ಈಗಾಗಲೇ ಸ್ಪಷ್ಡವಾಗಿದೆ.
ಸದಾನಂದಗೌಡ ಶೆಟ್ಟರ್ ಯತ್ನಾಳ್ ವಿಜಯೇಂದ್ರ ಎಲ್ಲಾ ಬೇರೆ ಬೇರೆ ಅವರುಗಳ ಮಧ್ಯೆ ಎಷ್ಟು ಬಿರುಕಿದೆ ಎಂಬುದು ಅವ್ರು ಮೊದ್ಲು ಅವ್ರು ನೋಡಲಿ ಎಂದರು
ರಾಜ್ಯದಲ್ಲಿ ಆಡಳಿತದಲ್ಲಿರುವುದು ಬಿಜೆಪಿ ಸರ್ಕಾರ ಅಲ್ಲ ಅದೊಂದು ಸಮ್ಮಿಶ್ರ ಸರ್ಕಾರ ಎಂದ ಡಿಕೆಶಿ ಕಾರ್ಯಕರ್ತರಿಲ್ಲದ ಬಿಜೆಪಿ, ರೌಡಿಗಳನ್ನ ಪಕ್ಷಕ್ಕೆ ಸೇರ್ಪಡೆ ಮಾಡ್ತಿದೆ ಎಂದು ವಾಗ್ದಾಳಿ ಮಾಡಿದರು.