ನಾಳೆ (ರವಿವಾರ) ನಗರಕ್ಕೆ ನಟ ಜಗ್ಗೇಶ

0
464

ಕಲಬುರ್ಗಿ, ನ.26- ನಗರದ ಶಹಾಬಜಾರ್‌ನ ಆರಾಧನಾ ಕಾಲೇಜಿನ ಆಟದ ಮೈದಾನದಲ್ಲಿ ನವೆಂಬರ್ 28ರಂದು ಮಧ್ಯಾಹ್ನ 1 ಗಂಟೆಗೆ 67ನೇ ಕನ್ನಡ ರಾಜ್ಯೋತ್ಸವ ಆಚರಣೆ ನಿಮಿತ್ಯ ಕಲ್ಯಾಣ ಸಿರಿ ಮತ್ತು ಕಲ್ಯಾಣ ಬಾಲ್ಯಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ರಾಜ್ಯಸಭಾ ಸದಸ್ಯ ಹಾಗೂ ನವರಸ ನಾಯಕ ನಟ ಜಗ್ಗೇಶ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶಿವಲಿಂಗ್ ಹಳಿಮನಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. ಅಮಿತ್ ಪಾಟೀಲ್ ವೇದಿಕೆಯಲ್ಲಿ ಪೋಲಿಸ್ ಇಲಾಖೆಯ ಬಸವರಾಜ್ ಅಣಕಲ್, ಸಮಾಜ ಸೇವಕ ಸುಭಾಷ್ ಕಮಲಾಪೂರೆ, ಸಾಹಿತಿ ಡಾ. ಶರಣಪ್ಪ ಮಾಳಗೆ, ಪತ್ರಕರ್ತ ಬಸವರಾಜ್ ಅ. ಚಿನಿವಾರ್, ಸುರೇಶ್ ನೆಲ್ಲೂರೆ, ಹೋರಾಟಗಾರ ಎಂ.ಎಸ್. ಪಾಟೀಲ್ ನರಿಬೋಳ್, ಸಹಕಾರ ಕ್ಷೇತ್ರದ ಪರಮೇಶ್ವರ್ ಮುನ್ನಳ್ಳಿ, ವೈದ್ಯಕೀಯ ಕ್ಷೇತ್ರದ ಮಂಗಲಮೂರ್ತಿ, ಸಂಗೀತ ಕ್ಷೇತ್ರದ ಗಂಗಾಧರ್ ಶಾಸ್ತಿçà ಕೊಡೇಕಲ್, ಆಡಳಿತ ಕ್ಷೇತ್ರದ ಡಾ. ರಾಜೇಶ್ವರಿ ಸಾಹು ಅವರಿಗೆ ಕಲ್ಯಾಣ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಉದ್ಘಾಟನೆಯನ್ನು ನವೀಕರಿಸಬಹುದಾದ ಇಂಧನ ಇಲಾಖೆಯ ಅಧ್ಯಕ್ಷ ಚಂದ್ರಕಾAತ್ ಬಿ. ಪಾಟೀಲ್ ಅವರು ನೆರವೇರಿಸುವರು. ದಿವ್ಯ ಸಾನಿಧ್ಯವನ್ನು ಶ್ರೀಶೈಲಂ ಡಾ. ಸಾರಂಗಧರ್ ದೇಶಿಕೇಂದ್ರ ಸ್ವಾಮೀಜಿ, ಮಾದನಹಿಪ್ಪರಗಾದ ಅಭಿನವ ಶಿವಲಿಂಗ ಮಹಾಸ್ವಾಮೀಜಿ, ಅಧ್ಯಕ್ಷತೆಯನ್ನು ರಾಜ್ಯ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಅವರು ವಹಿಸುವರು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಸಂದೀಪ್ ಭರಣಿ, ಬಸವರಾಜ್ ಒಡೆಯರ್, ಸುಭಾಷ್ ಮೂಲಗೆ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here