ಬ್ರಾಹ್ಮಣ ಸಮಾಜಕ್ಕೆ ಅವಮಾನ: ಮಲ್ಲೇಶ್ ವಿರುದ್ಧ ವಿಪ್ರರ ಪ್ರತಿಭಟನೆ

0
490

ಚಿತ್ತಾಪುರ, ನ.22- ಕಳೆದ 15ರಂದು ಮೈಸೂರಿನ ರಾಮಗೋವಿಂದ್ ರಂಗಮAದಿರದಲ್ಲಿ ನಡೆದ ಸಿದ್ಧರಾಮಯ್ಯ 75 ಎನ್ನುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರ ಉಪಸ್ಥಿತಿಯಲ್ಲಿ ಅವರ ಆಪ್ತ ಮಲ್ಲೇಶ್ ಅವರು ವಿನಾಕಾರಣ ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿಟ್ಟುಕೊಂಡು, ಸಮಾಜ ಬಾಂಧವರಿಗೆ ಅವಮಾನ ಆಗುವ ರೀತಿಯಲ್ಲಿ, ಸಮಾಜದಲ್ಲಿ ಬ್ರಾಹ್ಮಣರ ಬಗ್ಗೆ ಕೀಳರಿಮೆ ಹುಟ್ಟಿಸುವ ನಿಟ್ಟಿನಲ್ಲಿ ಬ್ರಾಹ್ಮಣ ಸಮುದಾಯವನ್ನು ನಂಬಬೇಡಿ ಅವರಿಂದ ದೇಶ ನಾಶವಾಗುತ್ತಿದೆ ಎಂಬ ವಿವಾದಿತ ಹೇಳಿಕೆಯ ಮೂಲಕ ಸಮಸ್ತ ಬ್ರಾಹ್ಮಣ ಸಮುದಾಯವನ್ನು ಅವಮಾನ ಮಾಡಿದವರ ಮೇಲೆ ಸೂಕ್ತ ಕನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲ್ಲೂಕ ಬ್ರಾಹ್ಮಣ ಸಮಾಜದವರು ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಯಲ್ಲಿ ಸಮಾಜದ ತಾಲ್ಲೂಕು ಗೌರವ ಅಧ್ಯಕ್ಷ ದೇವಿದಾಸ್ ಕುಲಕರ್ಣಿ, ತಾಲ್ಲೂಕು ಅಧ್ಯಕ್ಷ ಗಿರೀಶ್ ಜಾನಿಬ್, ಉಪಾಧ್ಯಕ್ಷ ವಿಶ್ವನಾಥ್ ಅಪಜಲ್‌ಪುರಕರ್, ಪ್ರಧಾನ ಕಾರ್ಯದರ್ಶಿ ಅನಂತನಾಗ್ ದೇಶಪಾಂಡೆ, ಪ್ರದೀಪ್ ಕುಲಕರ್ಣಿ, ಪ್ರಕಾಶ್ ಕುಲಕರ್ಣಿ, ನರಹರಿ ಕುಲಕರ್ಣಿ, ಸಂಜೀವ್ ಕುಲಕರ್ಣಿ, ಸುಧಾಕರರಾವ್ ಕುಲಕರ್ಣಿ, ಆನಂದ್ ಪಟವಾರಿ ಸ್ಪಪ್ನಾ ಪಾಟೀಲ್, ರಾಘವೇಂದ್ರ ಜಾನಿಬ್, ಪವನ್ ಜೋಷಿ, ರಾಘವೇಂದ್ರ ಕುಲಕರ್ಣಿ, ಶ್ರೀಹರಿ ಭಟ್, ರಾಜೀವ್ ಕುಲಕರ್ಣಿ, ನರಸಿಂಹ ಕುಲಕರ್ಣಿ ಸೇರಿದಂತೆ ಅನೇಕರು ಸಮಾಜದ ಪದಾಧಿಕಾರಿಗಳು ಮತ್ತು ಮುಖಂಡರು ಪಾಲ್ಗೊಂಡಿದ್ದರು.
ಬ್ರಾಹ್ಮಣ ಸಮಾಜದ ತಾಲ್ಲೂಕು ಆಧ್ಯಕ್ಷ ಗಿರೀಶ್ ಜಾನೀಬ್ ಅವರು ಮಾತನಾಡಿ, ಬ್ರಾಹ್ಮಣ ಸಮಾಜ ವಿರುದ್ಧ ದ್ವೇಷ ಭಾವನೆ ಮೂಡಿಸುತ್ತಿದ್ದು, ಆ ಮೂಲಕ ಸಮಾಜದ ಸ್ವಾಸ್ಥ್ಯ ಕದಡಿಸುತ್ತಿದ್ದಾರೆ. ಇದರಿಂದ ಬ್ರಾಹ್ಮಣ ಸಮುದಾಯಕ್ಕೆ ನೋವು ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶ ಮತ್ತು ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ ಮತ್ತು ಬ್ರಾಹ್ಮಣ್ಯ ಪದ್ದತಿಯನ್ನು ರಾಜಕೀಯ ಲಾಭಕಾಗಿ ಅವಮಾನಿಸಿ ಮತ್ತು ಬಿಟ್ಟಿ ಪ್ರಚಾರಕ್ಕಾಗಿ ಗುರಿಯಾಗಿಟ್ಟುಕೊಂಡು ಮೇಲಿಂದ ಮೇಲೆ ಅನೇಕ ಅವಿವೇಕಿಗಳು ಬ್ರಾಹ್ಮಣ ಪದ್ಧತಿ ಮತ್ತು ಬ್ರಾಹ್ಮಣ್ಯ ಸಂಪ್ರದಾಯಗಳನ್ನು ಹಿಯಾಳಿಸಿ ಅವಹೇಳನ ಮಾಡುವದನ್ನು ರೂಢಿಸಿಕೊಂಡಿದ್ದು ಮತ್ತೆ ಅಂತಹ ಘಟನೆ ನಡೆದಿರುವದು ಖಂಡನೀಯ ಎಂದು ಅವರು ಆಕ್ಷೇಪಿಸಿದರು.
ವಿವಾದಿತ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಪ್ರಯತ್ನಿಸಿದ ಮಲ್ಲೇಶ್ ಹಾಗು ಸದರಿ ಹೇಳಿಕೆಯನ್ನು ವಿರೋಧಿಸದೆ ಅದಕ್ಕೆ ಅನುಮೋದನೆ ನೀಡಿದ ಸಂವಿಧಾನಾತ್ಮಕ ಸ್ಥಾನದಲ್ಲಿ ಇರುವ ಮಾಜಿ ಮುಖ್ಯಮಂತ್ರಿ ಹಾಗು ಸದ್ಯದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರ ವಿರುದ್ಧ ಕರ್ನಾಟಕ ಸರ್ಕಾರ ಕೂಡಲೇ ಪ್ರಕರಣ ದಾಖಲಿಸಿ ಮಲ್ಲೇಶ್ ಅವರನ್ನು ಧಾರ್ಮಿಕ ಭಾವನೆ ಕೆರಳಿಸುವುದು (ಐಪಿಸಿ 129(ಎ) ಹಾಗೂ ದ್ವೇಷ ಭಾವನೆ ಹೆಚ್ಚಿಸುವ (ಐಪಿಸಿ 153 (ಬಿ) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂದು ಅವರು ಒತ್ತಾಯಿಸಿದರು. ಈ ಕುರಿತು ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರಿಗೆ ಗ್ರೇಡ್ 2 ತಹಸಿಲ್ದಾರ್ ಅಮಿತ್ ಕುಲಕರ್ಣಿ ಅವರ ಮೂಲಕ ಮನವಿ ಪತ್ರ ಸಲ್ಲಿಸಿದರು.

LEAVE A REPLY

Please enter your comment!
Please enter your name here