ಕಲಬುರಗಿ, ಜು. 4: ಈ ಹಿಂದೆ ಅಂದರೆ ರಮಝಾನ್ ಸಮಯದಲ್ಲಿ ಪ್ರತಿ ರವಿವಾರ ಕೊರೊನಾ ನಿಯಂತ್ರಣದ ನೆಪದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿತ್ತು. ಆದರೆ ಚಾಂದರಾತ ಒಂದೆ ದಿನ ಮಾತ್ರ ಲಾಕ್‌ಡೌನ್ ಮಾಡಲಾಯಿತು.
ಒಂದು ವಾರದ ನಂತರ ಬಂದ ಸಂಡೇ ಸರಕಾರ ಅನಲಾಕ್ ಮಾಡಿತ್ತು. ಆದರೆ ಮತ್ತೆ ಈಗ ಅದೇ ರಾಗ, ಅದೇ ಹಾಡು ಎಂಬAತೆ ಪ್ರತಿ ರವಿವಾರ ಲಾಕ್‌ಡೌನ್ ಮಾಡಲು ತಿರ್ಮಾನಿಸಿ ಆದೇಶ ಜಾರಿ ಮಾಡಿದ್ದು ಸ್ವಾಗತಾರ್ಹ.
ಆದರೆ…. ಇದರಿಂದ ಸಂಡೇ ಇಂದ ಕೊರೊನಾ ನಿಯಂತ್ರಕ್ಕೆ ಬರುವುದೇ? ಇದು ಕೊರೊನಾ ತಡೆಯಲು ಪರಿಹಾರಲ್ಲವಲ್ಲ ಎಂದು ತಜ್ಞರ ಸಮಿತಿ ಸರಕಾರಕ್ಕೆ ಹೇಳಿದೆ.
ಮತ್ತೇನು ಮಾಡಬೇಕು? ಸರಕಾರ ಆದಷ್ಟು ರ‍್ಯಾಂಡಮ್ ಟೆಸ್ಟ್ ಮಾಡಬೇಕು. ಅಲ್ಲದೇ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಜನಸಂದಣಿ ತಪ್ಪಿಸಲು ಪೋಲಿಸರು ಕ್ರಮ ಕೈಗೊಳ್ಳಬೇಕು. ಪಾಣಿಪುರಯಂತರ ರೋಗ ಹೆಚ್ಚಿಸಲು ಕಾರಣವಾದ ವ್ಯಾಪಾರವನ್ನು ನಿಷೇಧಿಸಬೇಕು. ಕೋವಿಡ್ ಆಸ್ಪತ್ರೆಯೆಂದು ಘೋಷಿಸಿದ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಆದೇಶಿಸಬೇಕು.