ಕಲಬುರಗಿ, ಜೂ. 24: ಗುರುವಾರ ದಿನಾಂಕ 25.06.2020 ವಿದ್ಯಾರ್ಥಿಗಳು ಕಾಯುತ್ತಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯ ದಿನಾಂಕ ಇದು.
ಸರಕಾರ ಏನೋ ಹೇಳುತ್ತಿದೇ ನಿಮ್ಮ ವಿದ್ಯಾರ್ಥಿಗಳು ನಿಮ್ಮ ಮನೆ ಯಲ್ಲರುವಷ್ಟೇ ಸುರಕ್ಷಿತ ಎಂದು ಆದರೆ ಪರೀಕ್ಷೆಗಳು ಎಷ್ಟರ ಮಟ್ಟಿಗೆ ಸುರಕ್ಷಿತವಾಗಿ ನಡೆಯುತ್ತವೆ ಎಂಬುದು ಪಾಲಕರ ಕಾತುರವಾಗಿದೆ.
ಇನ್ನು ಕೆಲವು ಪಾಲಕರು ನಮಗೆ ಸರಕಾರದ ಬಗ್ಗೆ ಭರವಸೆ ಇದೆ ಎಂದರೆ ಇನ್ನು ಕೆಲವರು ನಾವು ಸರಕಾರ ಏನು ಹೇಳುತ್ತದೆಯೇ ಅದು ಮಾಡುತ್ತದೇ ಎಂಬುದು ನಮಗೆ ಖಾತರಿ ಇಲ್ಲ. ಇದರಿಂದಾಗಿ ನಮ್ಮ ಮಕ್ಕಳು ಪರೀಕ್ಷೆಯಲ್ಲಿ ಪಾಸ್ ಆಗದಿದ್ದರೂ ಪರವಾಗಿಲ್ಲ. ಮಾರಕ ರೋಗ ಕೊರೊನಾದಿಂದ ದೂರ ಇದ್ದರೆ ಸಾಕು ಎಂದು ಹೇಳುತ್ತಿದ್ದಾರೆ.
ಇನ್ನು ಕೆಲವು ಪಾಲಕರು ಹೇಳುವಂತೆ ನಾವು ನಮ್ಮ ಮಕ್ಕಳನ್ನು ಈ ಬಾರಿಯ ಪರೀಕ್ಷೆಗೆ ಕಳುಹಿಸುವುದಿಲ್ಲ ಎಂದಿದ್ದಾರೆ. ಆದರೆ ಅದು ಎಷ್ಟು ಸತ್ಯ ಎಂಬುದು ನಾಳೆ ನಡೆಯುವ ಪರೀಕ್ಷೆಯಿಂದ ಸಾಬೀತಾಗುತ್ತದೆ.
ಸರಕಾರ, ಪಾಲಕರು ಏನೇ ಹೇಳಲಿ, ವಿದ್ಯಾರ್ಥಿಗಳು ಸುರಕ್ಷೀತವಾಗಿ ಪರೀಕ್ಷೆ ಬರೆದು, ಆರೋಗ್ಯವಾಗಿದ್ದರೆ ಸಾಕು ಎಂಬುದು ನಮ್ಮ ಪತ್ರಿಕೆಯ ಆಶಯವಾಗಿದೆ.