ಕಲಬುರಗಿ ಪಾಲಿಕೆ ಅಧಿಕಾರ ಕಸರತು 50-50 ಮೇಯರ್ ಬೇಡಿಕೆಗೆ ಮುಂದಾದ ಜೆಡಿಎಸ್

0
1490
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮ್ಮ ನಾಯಕರೊಂದಿಗೆ ಕಲಬುರಗಿ ಜೆಡಿಎಸ್ ಸದಸ್ಯರುಗಳು

ಕಲಬುರಗಿ, ಸೆ. 08: ಅತಂತ್ರ ಸ್ಥಿತಿಯ ಕಲಬುರಗಿ ಮಹಾನಗರಪಾಲಿಕೆಯಲ್ಲಿ ಮೇಯರ್‌ಗಾಗಿ ತೀವ್ರ ಕಸರತ್ತು ನಡೆಸಿದ್ದು, ಬೆಂಗಳೂರಿನಲ್ಲಿ ಪಾಲಿಕೆ ನೂತನ ಜೆಡಿಎಸ್ ಸದಸ್ಯರು ತಮ್ಮ ನಾಯಕರುಗಳೊಂದಿಗೆ ಬೀಡು ಬಿಟ್ಟಿದ್ದಾರೆ.
ಇಂದು ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಭೇಟಿಗೆ ನಿರ್ಧಸಿದ್ದು, ಕಲಬುರಗಿ ಮಹಾನಗರಪಾಲಿಕೆಯ ಎಲ್ಲ ಸ್ಥಾನಮಾನಗಳಲ್ಲಿ 50-50 ಬೇಡಿಕೆ ಇಡಲು ಜೆಡಿಎಸ್ ಸದಸ್ಯರು ಮುಂದಾಗಿದ್ದಾರೆ.
ಪಾಲಿಕೆಯಲ್ಲಿನ ಒಟು ಐದು ವರ್ಷದ ಅವಧಿಯಲ್ಲಿ ಎರಡು ಬಾರಿ ಮೇಯರ್ ಸ್ಥಾನ, ಮೂರು ಬಾರಿ ಉಪ ಮೇಯರ್ ಸ್ಥಾನ ಜೊತೆಗೆ ವಿವಿಧ ಸ್ಥಾಯಿ ಸಮಿತಿಗಳಲ್ಲಿ ನಾಲ್ವರು ಸದಸ್ಯರ ಪೈಕಿ ಇಬ್ಬರಿಗೆ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಜೆಡಿಎಸ್ ಸದಸ್ಯರದ್ದಾಗಿದೆ.
ಸದಸ್ಯರುಗಳ ಬೇಡಿಕೆ ನೋಡಿದ ನಂತರ ಬಿಜೆಪಿ-ಕಾಂಗ್ರೆಸ್ ನಾಯಕರ ಜೊತೆ ಎಚ್.ಡಿ. ಕುಮಾರ ಸ್ವಾಮಿ ಚರ್ಚೆ ನಡೆಸುವ ಸಾಧ್ಯತೆಯಿದ್ದು, ಯಾವ ಪಕ್ಷ ಕಿಂಗ್ ಮೇಕರ್‌ಗಳ ಬೇಡಿಕೆ ಈಡೇರಿಸುತ್ತೋ ಆ ಪಕ್ಷಕ್ಕೆ ಜೆಡಿಎಸ್. ಬೆಂಬಲ ಸೂಚಿಸುವ ಸಾಧ್ಯತೆಗಳಿವೆ.
ಕುಮಾರಸ್ವಾಮಿಯವರ ಬಿಡದಿ ಬಳಿಯ ಮನೆಯಲ್ಲಿ ಇಂದು ಮುಂಜಾನೆ ಜೆಡಿಎಸ್ ಸದಸ್ಯರ ಭೇಟಿಗೆ ಸಮಯ ನಿಗದಿಯಾಗಿದೆ.
ಈ ಮೂಲಕ ಸ್ಥಳೀಯ ಮಟ್ಟದಲ್ಲಿ ಬಿಜೆಪಿ, ಕಾಂಗ್ರೆಸ್ ಆಟಕ್ಕೆ ಬ್ರೇಕ್ ಬೀಳಲಿದೆ. ಅತಂತ್ರವಾಗಿರುವ ಕಲಬುರಗಿಯಲ್ಲಿ ಪಾಲಿಕೆಯಲ್ಲಿ ಹೆಚ್.ಡಿ.ಕೆ. ಯಾವ ಪಕ್ಷಕ್ಕೆ ಬೆಂಬಲ ಘೋಷಿಸುತ್ತಾರೋ ಅನ್ನೋದೆ ಕುತೂಹಲವಾಗಿದೆ.
ಅಂತೂ ಅಂತ್ರವಾಗಿರುವ ಪಾಲಿಕೆಯಲ್ಲಿ ಜೆಡಿಎಸ್ ಕಿಂಗ್‌ಮೇಕರ್ ಆಗಿ ಹೊರಹೊಮ್ಮಿದ್ದು, ರಾಜ್ಯ ರಾಜಕೀಯದಲ್ಲಿಯೂ ಈ ಹಿಂದೆ ಹಲವಾರು ಬಾರಿ ಜೆಡಿಎಸ್ ಕಿಂಗ್‌ಮೇಕರ್ ಆಗಿದ್ದು, ಇವರ ಬೆಂಬಲವಿಲ್ಲದೆ ಸರಕಾರ ರಚನೆ ಅಸಾಧ್ಯವಾಗಿತ್ತು.
ಇತ್ತ ಈಗಲೂ ಕೂಡ ಎಲ್ಲಾ ಜೆಡಿಎಸ್ ಸದಸ್ಯರಾದ ವಾರ್ಡ ನಂ. 34ರ ವಿಶಾಲ ನವರಂಗ, ವಾರ್ಡ ನಂ. 27ರ ಸಾಜೀದ ಕಲ್ಯಾಣಿ, ವಾರ್ಡ ನಂ. 42ರ ಅಲಿಮೋದ್ದಿನ್ ಪಟೇಲ್, ಮತ್ತು ವಾರ್ಡ ನಂ. 16ರ ವಿಜಯಲಕ್ಷಿö್ಮÃ ರಮೇಶ ಅವರುಗಳನ್ನು ರಾಜ್ಯ ಜೆಡಿಎಸ್ ನಾಯಕರಾದ ಉಸ್ತಾದ ನಾಸೀರ ಹುಸೇನ ಅವರು ಸೇರಿದಂತೆ ಹಲವಾರು ಕಲಬುರಗಿ ಜಿಲ್ಲೆಯ ಜೆಡಿಎಸ್ ನಾಯಕರೊಂದಿಗೆ ಬೆಂಗಳೂರಿಗೆ ಹೋಗಿ ಕುಳಿತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿರುವ ಕಸರತ್ತು ಯಾವ ಬಣಕ್ಕೆ ತಿರುಗುತ್ತೆ ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here